ಮಡಿಕೇರಿಯಲ್ಲಿ ಫೆ.19 ರಂದು ಔಷಧಿ ವ್ಯಾಪಾರಿಗಳ ಸಂಘದ ನೂತನ ಫಾಮಾ೯ ಭವನ ಲೋಕಾಪ೯ಣೆ

Feb 16, 2026 - 13:02
 0  440
ಮಡಿಕೇರಿಯಲ್ಲಿ ಫೆ.19 ರಂದು  ಔಷಧಿ ವ್ಯಾಪಾರಿಗಳ ಸಂಘದ ನೂತನ  ಫಾಮಾ೯ ಭವನ ಲೋಕಾಪ೯ಣೆ

ಮಡಿಕೇರಿ ಫೆ. 16 - ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದಿಂದ ನಿಮಿ೯ಸಲಾದ ಫಾಮಾ೯ ಭವನವು ಫೆಬ್ರವರಿ 19 ರಂದು ಗುರುವಾರ ಬೆಳಗ್ಗೆ 9.30 ಗಂಟೆಗೆ ಚೈನ್ ಗೇಟ್ ಬಳಿ ಉದ್ಘಾಟನೆಯಾಗಲಿದೆ.

ಕನಾ೯ಟಕ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಆರ್. ರಘುನಾಥ ರೆಡ್ಡಿ ಅವರು ಫಾಮಾ೯ಭವನವನ್ನು ಉದ್ಘಾಟಿಸಲಿದ್ದು, ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಅಂಬೆಕಲ್ ಜೀವನ್ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ಆಯೋಜಿತ ಸಮಾರಂಭದಲ್ಲಿ ಮೈಸೂರು ಪ್ರಾದೇಶಿಕ ಔಷಧ ನಿಯಂತ್ರಕರ ಕಛೇರಿಯ ಉಫ ಆಯುಕ್ತ ಬಿ.ಪಿ. ಅರುಣ್, ಕೊಡಗು ಜಿಲ್ಲಾ ಸಹಾಯಕ ಔಷಧ ನಿಯಂತ್ರಕರಾದ ಅಜಯ್ ರಾಜ್ ಷಾ, ಕನಾ೯ಟಕ ಔಷದಿ ವ್ಯಾಪಾರಿಗಳ ಸಂಘದ ಖಜಾಂಜಿ ಬಿ. ಉಮೇಶ್, ಸಂಘದ ರಾಜ್ಯ ಕಾನೂನು ಸಲಹೆಗಾರ ಕೆ.ಹರೀಶ್,, ಕೊಡಗು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಗೌರವ ಕಾಯ೯ದಶಿ೯ ಡಿ.ಐ. ಪುರುಷೋತ್ತಮ್, ಉಪಾಧ್ಯಕ್ಷರುಗಳಾದ ಅಂಬೆಕಲ್ ವಿನೋದ್, ಮೇವಿ೯ನ್ ಫನಾ೯ಂಡೀಸ್, ಜಂಟಿ ಕಾಯ೯ದಶಿ೯ ಕೆ.ವಸಂತ್ ಕುಮಾರ್, ಖಜಾಂಚಿ ಪ್ರಸಾದ್ ಗೌಡ ವೇದಿಕೆಯಲ್ಲಿರುತ್ತಾರೆ.

ಫಾಮಾ೯ ಭವನದ ಲೋಕಾಪ೯ಣೆ ಸಂದಭ೯ ಕೊಡಗಿನ ಹಿರಿಯ ಔಷಧಿ ವ್ಯಾಪಾರಸ್ಥರುಗಳಾದ ವೀರಾಜಪೇಟೆಯ ಗಣೇಶ್ ಮೆಡಿಕಲ್ಸ್ ನ ಸುದಶ೯ನ್ ರೈ, ಕುಶಾಲನಗರದ ರಾಧಾಕೖಷ್ಣ ಮೆಡಿಕಲ್ಸ್ ನ ಶ್ರೀಪತಿ ಎಸ್.ಎಲ್., ಸುಂಟಿಕೊಪ್ಪದ ಅಶ್ವಿನಿ ಮೆಡಿಕಲ್ಸ್ ನ ಕೆ. ಗೋಪಾಲ ಭಟ್ , ನಾಪೋಕ್ಲುವಿನ ರಾಘವೇಂದ್ರ ಮೆಡಿಕಲ್ಸ್ ನ ಎಂ.ಎಂ.ನರೇಂದ್ರ, ಸೋಮವಾರಪೇಟೆಯ ಮೆಡಿಕಲ್ ಎಂಪೋರಿಯಂ ಮೇವಿ೯ನ್ ಫೆನಾ೯ಂಡೀಸ್, ಮಡಿಕೇರಿಯ ವಿನೋದ್ ಮೆಡಿಕಲ್ಸ್ ನ ಅಂಬೆಕಲ್ ಕುಶಾಲಪ್ಪ, ಶನಿವಾರಸಂತೆಯ ಅನ್ನಪೂಣ೯ ಮೆಡಿಕಲ್ಸ್ ನ ಹೆಚ್.ಎಸ್. ಸುರೇಶ್, ಕೊಡ್ಲಿಪೇಟೆಯ ಶ್ರೀನಿವಾಸ ಮೆಡಿಕಲ್ಸ್ ನ ಎಸ್.ಎಸ್. ಶ್ರೀನಿವಾಸ್, ಗೋಣಿಕೊಪ್ಪಲುವಿನ ಕಾವೇರಿ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ನ ಎನ್.ಯು. ಭೀಮಯ್ಯ ಸಂಘದ ಪೂವಾ೯ಧ್ಯಕ್ಷರಾದ ಮಡಿಕೇರಿಯ ರಾಜ್ ಮೆಡಿಕಲ್ಸ್ ನ ಜಿ.ಎಸ್. ಬಸವರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಪ್ರಕಟಣೆ ತಿಳಿಸಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0