Kodagu

ಮಡಿಕೇರಿ ಪೊಲೀಸ್ ವಸತಿ ಗೃಹದಲ್ಲಿ ಕಳವು ಪ್ರಕರಣ: ಆರೋಪಿಗಳ ಪತ್ತೆಗೆ ಪೊಲೀಸ್ ಇಲಾಖೆಗೆ ಎಷ್ಟು ಲಕ್ಷ ರೂ ಖರ್ಚಾಗಿದೆ ಗೊತ್ತೇ!

admincoorgdaily

ಮಡಿಕೇರಿ:ಜೂನ್ ತಿಂಗಳಲ್ಲಿ ಪೊಲೀಸ್ ವಸತಿಗೃಹದಲ್ಲಿ 95 ಸಾವಿರ ನಗದು ಹಾಗೂ 5.5 ಗ್ರಾಂ ಚಿನ್ನಾಭರಣ ಕಳ್ಳವಾಗಿತ್ತು. ಆದರೆ ಆರೋಪಿಗಳ ಪತ್ತೆಗೆ 15 ಲಕ್ಷ ರೂ ಇಲಾಖೆಗೆ ವೆಚ್ಚವಾಗಿದ್ದು, 700 ಕಿ. ಮೀ ವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾಹಿತಿ ನೀಡಿದ್ದಾರೆ. ಮಧ್ಯಪ್ರದೇಶದ ಥಾರ್ ಜಿಲ್ಲೆಯ ನಾರ್ವಲ್ಲಿ ಗ್ರಾಮದ ಸುರೇಶ್ ಸೆಂಗಾರ್(23) ಹಾಗೂ ಮನೀಶ್ ಭಗೆಲ್ (27) ಬಂಧಿತರು. ಆರೋಪಿಗಳ ಪತ್ತೆಗೆ ಗೋವಾ, ಮಹಾರಾಷ್ಟ್ರ,ಮಧ್ಯಪ್ರದೇಶದಲ್ಲಿ 50ಕ್ಕೂ ಹೆಚ್ಚು ಪೊಲೀಸರು 30 ದಿನಗಳು ಕಾಲ ಶೋಧ ನಡೆಸಿದ್ದು ಆರೋಪಿಗಳು ಮತ್ತೆ ಕಳವು ಮಾಡಲು ಪಿರಿಯಾಪಟ್ಟಣಕ್ಕೆ ಬಂದಾಗ ಬಂಧಿಸಿದ್ದರು.