ಕನಾ೯ಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ವಿಭಾಗದಲ್ಲಿ ತೇಗ೯ಡೆ

Dec 25, 2025 - 12:27
Dec 25, 2025 - 15:00
 0  153
ಕನಾ೯ಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್ ವಿಭಾಗದಲ್ಲಿ ತೇಗ೯ಡೆ

ಮಡಿಕೇರಿ ಡಿ.25 - ಕನಾ೯ಟಕ ಶಾಸ್ತ್ರೀಯ ಸಂಗೀತದ ಸೀನಿಯರ್ ವಿಭಾಗದಲ್ಲಿ ತೇಗ೯ಡೆಯಾಗಿರುವ ಮಡಿಕೇರಿಯ ಪ್ರತಿಭಾವಂತ ವಿದ್ಯಾಥಿ೯ ತಾಪಂಡ ಹಷಿ೯ತ್ ಪೊನ್ನಪ್ಪ, ಕಲಾಪ್ರತಿಭೋತ್ಸವದಲ್ಲಿ ರಾಜ್ಯಮಟ್ಟಕ್ಕೂ ಆಯ್ಕೆಯಾಗಿ ಸಾಧನೆ ತೋರಿದ್ದಾರೆ.

2025 ನೇ ಸಾಲಿನಲ್ಲಿ ಕನಾ೯ಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದಶ೯ನ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ವತಿಯಿಂದ ನಡೆಸಲಾದ ಕನಾ೯ಟಕ ಶಾಸ್ತ್ರೀಯ ಸಂಗೀತದ ಸೀನಿಯರ್ ವಿಭಾಗದಲ್ಲಿ ಕೊಡಗಿನಿಂದ ಪರೀಕ್ಷೆ ಬರೆದಿದ್ದ ಏಕೈಕ ವಿದ್ಯಾಥಿ೯ ತಾಪಂಡ ಹಷಿ೯ತ್ ಪೊನ್ನಪ್ಪ, 500 ಅಂಕಗಳಿಗೆ 285 ಅಂಕ ಪಡೆದು ದ್ವಿತೀಯ ದಜೆ೯ಯಲ್ಲಿ ತೇಗ೯ಡೆಯಾಗಿದ್ದಾರೆ.

ಇವರು ಮಡಿಕೇರಿಯ ದೇಚೂರು ನಿವಾಸಿ ತಾಪಂಡ ಲೋಕೇಶ್ ಮತ್ತು ಶುಭಾ ದಂಪತಿಯ ಪುತ್ರರಾಗಿದ್ದು ನಗರದ . ಸಂಗೀತ ಶಿಕ್ಷಕಿ ಸರೋಜಾ ಸುಧಾಕರ್ ಬಳಿ ಸಂಗೀತಾಭ್ಯಾಸ ಮಾಡುತ್ತಿದ್ದು, ಮಡಿಕೇರಿಯ ಸಂತ ಜೋಸೇಫರ ಪ್ರೌಡ ಶಾಲೆಯಲ್ಲಿ 10 ನೇ ತರಗತಿ ವಿದ್ಯಾಥಿ೯ಯಾಗಿದ್ದಾರೆ.

ಕನ್ನಡ ಮತ್ತು ಸಂಸ್ಕೖತಿ ಇಲಾಖೆಯು ಮಡಿಕೇರಿಯಲ್ಲಿ ನಡೆಸಿದ ಕಲಾ ಪ್ರತಿಬೋತ್ಸವದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ತಾಪಂಡ ಹಷಿ೯ತ್ ಪೊನ್ನಪ್ಪ, ಕಿಶೋರ ಪ್ರತಿಭೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ಮೈಸೂರಿನಲ್ಲಿ ನಡೆದ ವಿಭಾಗ ಮಟ್ಟದಲ್ಲಿಯೂ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0