ನಾಳೆ ಕರೆಂಟ್ ಇರಲ್ಲ! ನಿಮ್ಮೂರಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆಯೇ!

ನಾಳೆ ಕರೆಂಟ್ ಇರಲ್ಲ! ನಿಮ್ಮೂರಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆಯೇ!

ಮಡಿಕೇರಿ:66/11ಕೆ.ವಿ ಮಡಿಕೇರಿ ವಿದ್ಯುತ್ ಉಪಕೇಂದ್ರದಲ್ಲಿ ನಾಳೆ(ಆಗಸ್ಟ್ 12) ರಂದು ಬೆಳಿಗ್ಗೆ 10.00 ರಿಂದ 5.00 ಗಂಟೆಯವರೆಗೆ ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಯ ಉಂಟಾಗಲಿದೆ. ಆದ್ದರಿಂದ ಮಡಿಕೇರಿ ನಗರ, ರಾಜಸೀಟ್, ಗದ್ದಿಗೆ, ಕೋಟೆ, ಕುಂಡಾಮೇಸ್ತ್ರಿ, ಓಂಕರೇಶ್ವರ, ಜಿ.ಟಿ ರಸ್ತೆ, ಕೆ.ಎಸ್.ಆರ್.ಟಿ.ಸಿ, ಮೇಕೇರಿ, ಭಾಗಮಂಡಲ, ಬೋಯಿಕೇರಿ, ಸಂಪಾಜೆ, ಗಾಳಿಬೀಡು, ಮಕ್ಕಂದೂರು, ಹೆಬ್ಬೆಟ್ಟಗೇರಿ, ಕೆ.ಬಾಡಗ, ತಾಳತ್ಮನೆ. ಬೆಟ್ಟಗೇರಿ, ಚೆಟ್ಟಿಮಾನಿ, ಚೇರಂಬಾಣೆ, ಮಕ್ಕಂದೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕಾರ್ಯನಿರ್ವಾಹಕ ಇಂಜಿನಿಯರ್ (ವಿ)ಕಾರ್ಯ ಮತ್ತು ಪಾಲನೆ ವಿಭಾಗ, ಚಾವಿಸನನಿ, ಮಡಿಕೇರಿ ಅವರು ಕೋರಿದ್ದಾರೆ.