State News

ತಳ್ಳುಗಾಡಿ ತಂದು ಎಟಿಎಂ ಯಂತ್ರವನ್ನೇ ಹೊತ್ತೊಯ್ದರು!

admincoorgdaily

Photo credit: TV09

ಬೆಳಗಾವಿ, ಡಿ. 02: ಬೆಳಗಾವಿ ತಾಲೂಕು ಹೊಸ ವಂಟಮೂರಿ ಗ್ರಾಮದಲ್ಲಿ ಕಳ್ಳರ ಗ್ಯಾಂಗ್‌ ತಳ್ಳುಗಾಡಿ ಬಳಸಿ ಎಟಿಎಂ ಯಂತ್ರವನ್ನೇ ಎತ್ತಿಕೊಂಡು ಹೋಗಿರುವ ಕೃತ್ಯ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಹೆದ್ದಾರಿ–48 ಪಕ್ಕದಲ್ಲಿರುವ ಇಂಡಿಯನ್ ಬ್ಯಾಂಕ್‌ ಎಟಿಎಂ ಯಂತ್ರವನ್ನು ಮೂವರ ಗ್ಯಾಂಗ್‌ ಹೊತ್ತುಕೊಂಡು ಹೋಗಿದೆ.

ರಾತ್ರಿ ವೇಳೆ ಎಟಿಎಂ ಯಂತ್ರವನ್ನು ಹೊರತೆಗೆದು ತಳ್ಳುಗಾಡಿಯಲ್ಲಿ ಸುಮಾರು 200 ಮೀಟರ್‌ ದೂರಕ್ಕೆ ಸಾಗಿಸಿರುವ ಕಳ್ಳರು, ನಂತರ ಅದನ್ನು ತಮ್ಮ ವಾಹನಕ್ಕೆ ಏರಿಸ ಪರಾರಿಯಾಗಿದ್ದಾರೆ. ಈ ಚಟುವಟಿಕೆ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಎಟಿಎಂ ಯಂತ್ರದಲ್ಲಿ ಒಂದು ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಇರಬಹುದೆಂದು ಶಂಕಿಸಲಾಗಿದೆ. 

ಘಟನೆ ಬಳಿಕ ಕಾಕತಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಸುಳಿವು ಹುಡುಕುವ ಕಾರ್ಯ ಬಿರುಸಿನಿಂದ ಮುಂದುವರಿಸಿದ್ದಾರೆ.