Kodagu

ಸುಂಟಿಕೊಪ್ಪದಲ್ಲಿ ಕಳ್ಳರ ಕೈ ಚಳಕ:ಸೈಬರ್ ಶಾಪ್ ಮತ್ತು ಬ್ಯೂಟಿ ಪಾರ್ಲರ್ ನಲ್ಲಿ ಕಳವು

admincoorgdaily

ಸುಂಟಿಕೊಪ್ಪದಲ್ಲಿ ಕಳ್ಳರ ಕೈ ಚಳಕ:ಸೈಬರ್ ಶಾಪ್ ಮತ್ತು ಬ್ಯೂಟಿ ಪಾರ್ಲರ್ ನಲ್ಲಿ ಕಳವು

ಸುಂಟಿಕೊಪ್ಪ ; ಶ್ರೀರಾಮ ಕಾಂಪ್ಲೆಕ್ಸ್ ನಲ್ಲಿ ಇರುವ ಎರಡು ಅಂಗಡಿಗಳಿಗೆ ಕಳ್ಳರು ನುಗ್ಗಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಈ ಕಾಂಪ್ಲೆಕ್ಸ್ ನಲ್ಲಿರುವ ತಿರುಮೂರ್ತಿ ಎಂಬುವವರ ಸೈಬರ್ ಅಂಗಡಿಗೆ ನುಗ್ಗಿದ ಕಳ್ಳರು ಅಲ್ಲಿಯ ಬೀಗ ಹೊಡೆದು ಅಂದಾಜು ರೂಪಾಯಿ ,10ರಿಂದ 15 ಸಾವಿರದಷ್ಟು ಹಣವನ್ನು ಕಳ್ಳತನ ನಡೆಸಿದ್ದಾರೆ. ನಂತರ ಆ ಅಂಗಡಿಯ ಹಿಂಭಾಗದಲ್ಲಿರುವ ಬ್ಯೂಟಿ ಪಾರ್ಲರ್ ಗೆ ನುಗ್ಗಿದ ಕಳ್ಳರು ಹಣಕ್ಕಾಗಿ ತಡಕಾಡಿದ್ದಾರೆ. ಆದರೆ ಯಾವುದೇ ಬೆಲೆಬಾಳುವ ವಸ್ತುಗಳು ಮತ್ತು ನಗದು ಸಿಗದೇ ವಾಪಸ್ ಆಗಿರುವುದು ಕಂಡುಬಂದಿದೆ. ಇದೇ ರೀತಿಯ ಕಳ್ಳತನದ ಪ್ರಕರಣವು ಕಳೆದ ಭಾನುವಾರ ಗದ್ದೆ ಹಳ್ಳದಲ್ಲಿರುವ ವಂದನ ಬಾರ್ ಗೆ ನುಗ್ಗಿ ಅಲ್ಲಿಯೂ ಹಣವನ್ನು ಕದ್ದು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಸಿಸಿ ಕ್ಯಾಮರದ ಪರಿಶೀಲನೆ ನಡೆಸಿ ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.