ಅ.12ರಂದು ಕಾನ್ ಬೈಲ್ ನಲ್ಲಿ ಮೂರನೇ ಓಣಂ ಆಚರಣೆ

ಅ.12ರಂದು ಕಾನ್ ಬೈಲ್ ನಲ್ಲಿ ಮೂರನೇ  ಓಣಂ ಆಚರಣೆ
Photo credit: wikipedia

ಸುಂಟಿಕೊಪ್ಪ : ಕುಶಾಲನಗರ ತಾಲ್ಲೂಕಿನ ನಾಕೂರು ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಸಮಸ್ತ ಮಲೆಯಾಳಿ ಭಾಷಿಗರ ಹಿಂದೂ ಮಲೆಯಾಳಿ ಸಮಾಜದ ವತಿಯಿಂದ ಮೂರನೇ ವರ್ಷದ ಓಣಂ ಆಚರಣೆ ತಾ.12 ರಂದು ಕಾನ್ ಬೈಲ್ ನಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಲಿದೆ.

 ಅಂದು ಬೆಳಗ್ಗೆ 9 ಗಂಟೆಗೆ ಕಲ್ಲೂರು ಬಸವೇಶ್ವರ ದೇವಾಲಯ ದಿಂದ ಕಾನ್ ಬೈಲ್ ಶಾಲೆಯವರೆಗೂ ಚಂಡೆ ಮೇಳದೊಂದಿಗೆ ಮೆರವಣಿಗೆ ಇರುತ್ತದೆ. ಬಳಿಕ ಕಾನ್ ಬೈಲ್ ನ ಸರ್ಕಾರಿ ಶಾಲಾ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಚಿವ ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಶಾಸಕ ಡಾ.ಮಂಥರಗೌಡ ಉದ್ಘಾಟಿಸಲಿದ್ದಾರೆ.

ಓಣಂ ಅಂಗವಾಗಿ ಮಲೆಯಾಳಿ ಹಿಂದೂ ಸಮಾಜ ಬಾಂಧವರಿಗೆ ಪೂಕಳಂ ಸ್ಪರ್ಧೆ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಬಳಿಕ ತಿರುವಾದಿರ ನೃತ್ಯ ದೊಂದಿಗೆ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಹಾಗೆಯೇ ನೆರೆದ ಸರ್ವರಿಗೂ ಕೇರಳದ ವಿಶೇಷ ಬಾಣಸಿಗರಿಂದ ತಯಾರಿಸಿದ ಓಣಂ ಸದ್ಯ ಏರ್ಪಡಿಸಲಾಗಿದೆ. ಎಂದು ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ಕೆ.ಜಿ.ರಾಜ ತಿಳಿಸಿದ್ದಾರೆ.