ಅಕ್ರಮ ಗೋವು ಸಾಗಾಟ:ಮೂವರ ಬಂಧನ
admincoorgdaily

ವಿರಾಜಪೇಟೆ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡಿ ಕೇರಳ ರಾಜ್ಯದ ಖಸಾಯಿಕಾನೆಗೆ ಸಾಗಾಟ ಮಾಡಲು ಯತ್ನಿಸುತಿದ್ದ ವ್ಯಕ್ತಿಗಳನ್ನು ಬಂಧಿಸಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ವಿರಾಜಪೇಟೆ ತಾಲೂಕು ಕಾಕೋಟುಪರಂಬು ವ್ಯಾಪ್ತಿ ಯ ಜೌಕಿ ಗ್ರಾಮದ ನಿವಾಸಿ ರಮೇಶ್ ಪೂಜಾರಿ (60 ),ಕಡಂಗ ಗ್ರಾಮದ ಹ್ಯಾರಿಸ್ ಕೆ.ಎ. ಪ್ರಾಯ (32) ,ಮೊಹಮ್ಮದ್ ಶಫೀಕ್ (29 )ವರ್ಷ ಗೋವುಗಳನ್ನು ಸಾಗಾಟ ಮಾಡಿ ಬಂಧಿತರಾಗಿರುವ ವ್ಯಕ್ಯಿಗಳು.
ಘಟನೆ ವಿವರ: ತಾ.17-08-2026ರ ನಡು ಮುಂಜಾನೆ ಯಾರಿಗೂ ಅರಿಯದ ರೀತಿಯಲ್ಲಿ ಸಾಕಿ ಸಲುಹಿದ್ದ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿ ಪೊಲೀಸರಿಗೆ ಮಾಹಿತಿ ಬಂದ ಮೇರೆಗೆ ಕಾರ್ಯಪ್ರವರ್ತರಾದ ಪೊಲೀಸರು ಕಡಂಗ ಪೊದ್ದುಮಾನಿ ಎಂಬಲ್ಲಿ ಸಂಶಯ ಮೇರೆಗೆ ಪಿಕ್ ಅಪ್ ವಾಹನಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ.
ತಪಾಸಣೆಯ ವೇಳೆಯಲ್ಲಿ ಎರಡು ವಾಹನಗಳಲ್ಲಿ ಒಟ್ಟು 06 ಜಾನುವಾರುಗಳು ಪತ್ತೆಯಾಗಿದೆ. ಜಾನುವಾರುಗಳನ್ನು ಸಂರಕ್ಷಣೆ ಮಾಡಿದ ಪೊಲೀಸರು ನ್ಯಾಯಾಲಯದ ಅನುಮತಿಯ ಮೇರೆಗೆ ಪುಣ್ಯಕೋಟಿ ಗೋವು ಸಂರಕ್ಷಣಾ ಕೇಂದ್ರಕ್ಕೆ ರವಾನಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರಮೇಶ್ ಪೂಜಾರಿ,ಹ್ಯಾರಿಸ್ ಕೆ.ಎ. ಮತ್ತು ಮೊಹಮ್ಮದ್ ಶಫೀಕ್ ವಿರುದ್ದ ಕರ್ನಾಟಕ ರಾಜ್ಯ ಗೋ ಸಂರಕ್ಷಣಾ ಮತ್ತು ಗೋ ಹತ್ಯೆ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದು ಕೃತ್ಯಕ್ಕೆ ಬಳಸಿದ್ದ ಕೆಎ 12 ಸಿ-3899 ಮತ್ತು ಕೆಎ 12ಸಿ -7781 ಪಿಕ್ ಅಪ್ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ವಿರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಮಹೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ ಅವರ ನಿರ್ದೇಶನ ದ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು. ಅಪರಾಧ ಪತ್ತೆ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಚರಣೆ ಯಲ್ಲಿ ಭಾಗವಹಿಸಿದ್ದರು.
ವರದಿ:ಕಿಶೋರ್ ಕುಮಾರ್ ಶೆಟ್ಟಿ