ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದಿಂದ ಜನವರಿ 20ರಂದು ಥ್ರೋಬಾಲ್ ಪಂದ್ಯಾವಳಿ

Dec 23, 2025 - 09:47
Dec 23, 2025 - 10:32
 0  272
ಪೊನ್ನಂಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದಿಂದ ಜನವರಿ 20ರಂದು ಥ್ರೋಬಾಲ್ ಪಂದ್ಯಾವಳಿ

ಪೊನ್ನಂಪೇಟೆ:' ಕೊಡವ ಸಮಾಜದ ಪೊಮ್ಮಕ್ಕಡ ಕೂಟದಿಂದ ಜನವರಿ 20ರಂದು ಜನಾಂಗದ ಮಹಿಳಾ ಸಂಘ ಸಂಸ್ಥೆಯ ತಂಡಗಳಿಗೆ ಥ್ರೋಬಾಲ್ ಟೂರ್ನಮೆಂಟ್ ಆಯೋಜಿಸುತ್ತಿದ್ದು, ಪೊನ್ನಂಪೇಟೆ ಕೊಡವ ಸಮಾಜ ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಟೂರ್ನಮೆಂಟ್ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ನಿವೃತ್ತ ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಅವರು ತಿಳಿಸಿದ್ದಾರೆ.

 ಈ ಬಗ್ಗೆ ಪೊನ್ನಂಪೇಟೆ ಪೊಮ್ಮಕ್ಕಡ ಕೂಟದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಮ್ಮಕ್ಕಡ ಕೂಟದ ಆಡಳಿತ ಮಂಡಳಿ ತೀರ್ಮಾನದಂತೆ ಈ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ, ಮಹಿಳೆಯರಲ್ಲಿ ಕ್ರೀಡಾ ಸಾಮರ್ಥ್ಯ ಹೊರತರಲು ಒಗ್ಗಟ್ಟು ಹಾಗೂ ಪರಸ್ಪರ ಸಂಪರ್ಕ ಸ್ನೇಹ ಬೆಳೆಸಲು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದು, ಮಹಿಳೆಯರಲ್ಲಿ ಆರೋಗ್ಯದತ್ತ ಹೆಚ್ಚಿನ ಕಾಳಜಿ, ಮನೋರಂಜನೆ ಹಾಗೂ ಮಹಿಳೆಯರು ಆರೋಗ್ಯವಾಗಿದ್ದರೆ ಸಮಾಜವು ಸಹ ಶಕ್ತಿಯುತವಾಗಿರುತ್ತದೆ ಎಂಬ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಪೊಮ್ಮಕ್ಕಡ ಕೂಟದ ಗೌರವ ಕಾರ್ಯದರ್ಶಿ, ಬಲ್ಲಾಡಿಚಂಡ ಕಸ್ತೂರಿ ಸೋಮಯ್ಯ ಅವರು ಮಾತನಾಡಿ ಥ್ರೋಬಾಲ್ ಟೂರ್ನಮೆಂಟ್ 18 ವರ್ಷ ಮೀರಿದ ಕೊಡವ ಜನಾಂಗದ ಯಾವುದೇ ಸಂಘ ಸಂಸ್ಥೆಗಳನ್ನು ಪ್ರತಿನಿಧಿಸುವ ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕು ವ್ಯಾಪ್ತಿಯ ತಂಡವಾಗಿರಬೇಕು, ಇದಲ್ಲದೆ ಟೊರ್ನಮೆಂಟಿನಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಆಕರ್ಷಕ ಟ್ರೋಪಿಯೊಂದಿಗೆ ನಗದು ಅನುಕ್ರಮವಾಗಿ 15ಸಾವಿರ 10 ಸಾವಿರ ಮತ್ತು 7 ಸಾವಿರ ಬಹುಮಾನ ಇರುತ್ತದೆ. ತಂಡಗಳನ್ನು ನೋಂದಾಯಿಸಿಕೊಳ್ಳಲು ಜನವರಿ 10 ಕೊನೆಯ ದಿನವಾಗಿದ್ದು, ಮೊದಲು ಬರುವ 16 ತಂಡಗಳಿಗೆ ಮಾತ್ರ ಅವಕಾಶ ಇರುತ್ತದೆ.

 ತಂಡಗಳನ್ನು ನೋಂದಾಯಿಸಿಕೊಳ್ಳಲು ಪೊಮ್ಮಕ್ಕಡ ಕೂಟದ ಅಧ್ಯಕ್ಷರು 94802 90355, ಕಾರ್ಯದರ್ಶಿ 91417 44072 ಮೂಲಕ ಹಾಗೆಯೇ ಪೊನ್ನಂಪೇಟೆ ಕೊಡವ ಸಮಾಜದ ಕಚೇರಿಯಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0