Kodagu

ಇಬ್ಬನಿವಳವಾಡಿ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷ

admincoorgdaily

ಇಬ್ಬನಿವಳವಾಡಿ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷ

ಮಡಿಕೇರಿ;ಇಬ್ಬನಿವಳವಾಡಿ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷಗೊಂಡಿದ್ದು, ಗ್ರಾಮದ ಪೊನ್ನ್ ಚೆಟ್ಟಿರ ಸಂದೀಪ್‌ ಎಂಬುವರ ತೋಟದಲ್ಲಿ ಗೋಚರವಾಗಿದೆ.ಹುಲಿಯ ಓಡಾಟ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇಬ್ಬನಿವಳವಾಡಿ ಗ್ರಾಮಸ್ಥರಲ್ಲಿ ತೀವ್ರ ಆತಂಕ ಎದುರಾಗಿದ್ದು, ಮಡಿಕೇರಿ‌ ನಗರದಿಂದ‌ ಕೇವಲ‌ ಎರಡು ಕಿಮಿ ದೂರದಲ್ಲಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ.

ಈ ಭಾಗದ ಏಳೆಂಟು ಕಿ.ಮಿ ವ್ಯಾಪ್ತಿಯಲ್ಲಿ ಹುಲಿ ಹೋಲುವ ಪ್ರಾಣಿಯ ಓಡಾಟದ ಮಾಹಿತಿ ಇತ್ತು.ಆದರೆ ಹುಲಿಯೋ, ಪೆರ್ಪಣವೋ ಎಂಬ ಗೊಂದಲ ಇತ್ತು, ಇದೀಗ ಅದು ಹುಲಿ‌ ಎಂದು ಖಚಿತವಾಗಿದೆ. ಹುಲಿ ಸೆರೆಗೆ ಸರ್ಕಾರಕ್ಕೆ‌ ಮನವಿ ಮಾಡಲಾಗಿದೆ ಎಂದು ಡಿಸಿಎಫ್‌ ಅಭಿಶೇಕ್ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರು ಎಚ್ಚರಿಕೆಯಿಂದ‌ ಇರುವಂತೆ ಡಾ.‌ಮಂತರ್‌ಗೌಡ ಮನವಿ ಮಾಡಿದ್ದು, ಕೂಡಲೇ ಕಾರ್ಯಾಚರಣೆ ನಡೆಸುವಂತೆ ಇಲಾಖೆ ಗೆ ಶಾಸಕರು ಸೂಚನೆ ನೀಡಿದ್ದಾರೆ.