ಇಬ್ನಿವಳವಾಡಿ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷ;ಥರ್ಮಲ್ ಡ್ರೋನ್ ಬಳಸಿ ಶೋಧ ಕಾರ್ಯ
admincoorgdaily

ಇಬ್ಬನಿವಳವಾಡಿ ಗ್ರಾಮದಲ್ಲಿ ಹುಲಿ ಗೋಚರ ಹಿನ್ನೆಲೆ,ಹುಲಿ ಸೆರೆಗೆ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಯುತ್ತಿದೆ. ಸಿಂಕೋನ, ಇಬ್ಬನಿವಳವಾಡಿ, ಕಗ್ಗೋಡ್ಲು ವ್ಯಾಪ್ತಿಯಲ್ಲಿ ಹುಲಿಗಾಗಿ ಹುಡುಕಾಟ ನಡೆಯುತ್ತಿದೆ.
ಥರ್ಮಲ್ ಡ್ರೋನ್ ಬಳಸಿ ಶೋಧ ಕಾರ್ಯ ನಡೆಯುತ್ತಿದೆ. ಮೂರು ಸಾಕಾನೆಗಳಾದ ಕಂಜನ್, ಈಶ್ವರ, ಪ್ರಶಾಂತ್ ಆಗಮಿಸಿದ್ದು, ಕಾರ್ಯಾಚರಣೆಗೆ ಡಿಸಿಎಫ್ ಅಭಿಶೇಕ್ ನೇತೃತ್ವ ವಹಿಸಿದ್ದಾರೆ. ನಿನ್ನೆಯಿಂದ 8-10 ಕಿ.ಮಿ ವ್ಯಾಪ್ತಿಯಲ್ಲಿ ಹುಲಿ ಓಡಾಡುತ್ತಿದ್ದು,
ಕಳೆದ ರಾತ್ರಿ 10 ಗಂಟೆಯವರೆಗೆ ನಡೆದಿದ್ದ ಶೋಧ ಕಾರ್ಯ ನಡೆದಿದ್ದು, ಇಂದು ಬೆಳಗ್ಗಿನ ಜಾವ ಮತ್ತೆ ಶೋಧ ಆರಂಭ ಕಾರ್ಯಾರಂಭವಾಗಿದ್ದು,ಹುಲಿ ಓಡಾಟ ಥರ್ಮಲ್ ಡ್ರೋನ್‌ನಲ್ಲಿ ಇದುವರೆಗೆ ಪತ್ತೆಯಾಗಿಲ್ಲ. ಡಿ. ಸಿ. ಎಫ್., ಎ. ಸಿ. ಎಫ್, ಸೇರಿದಂತೆ ಅರಣ್ಯ ಇಲಾಖೆ ಯ ಹಿರಿಯ ಅಧಿಕಾರಿ ಗಳಿಂದ ಕಾರ್ಯಾಚರಣೆ ಉಸ್ತುವಾರಿ ವಹಿಸಿಕೊಂಡಿದ್ದಾರೆ.