ಆಲೆಮಾಡ ಕುಟುಂಬದ ವತಿಯಿಂದ ಕೊಡವ ಕುಟುಂಬಗಳ ನಡುವೆ ತೋಕ್ ನಮ್ಮೆ
admincoorgdaily

ಮಡಿಕೇರಿ: ಕೊಡವರ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ತೋಕ್‌ನಮ್ಮೆಗೆ ಮತ್ತೆ ಮೆರುಗು ನೀಡಲು ಪೊನ್ನಂಪೇಟೆಯಲ್ಲಿ ಆಲೆಮಾಡ ಕುಟುಂಬ ಸಜ್ಜಾಗುತ್ತಿದೆ. ಆಲೆಮಾಡ ಕುಟುಂಬದ ವತಿಯಿಂದ ಅಂತರ-ಕೊಡವ ಕುಟುಂಬಗಳ ಶೂಟಿಂಗ್ ಸ್ಪರ್ಧೆ ಆಲೆಮಾಡ ತೋಕ್ ನಮ್ಮೆ-೨೦೨೬ ಅಕ್ಟೋಬರ್ ೧೦, ೧೧ರಂದು ಪೊನ್ನಂಪೇಟೆಯ ಕೆಪಿಎಸ್ ಮೈದಾನದಲ್ಲಿ ನಡೆಯಲಿದೆ.
ಕೊಡವ ಶೂಟರ್ಸ್ ಫೆಡರೇಷನ್ ಸಹಯೋಗದೊಂದಿಗೆ ನಡೆಯಲಿರುವ ಈ ಎರಡನೇ ಆವೃತ್ತಿಯಲ್ಲಿ ಸುಮಾರು ೩೫೦ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ನಿರ್ದೇಶಕ ಕೀರ್ತನ್ ತಮ್ಮಯ್ಯ ತಿಳಿಸಿದರು.
೧೨ ಬೋರ್ ಮತ್ತು .೨೨ ರೈಫಲ್ ವಿಭಾಗಗಳಲ್ಲಿ ಸ್ಪರ್ಧೆ ಇರಲಿದೆ. ಪ್ರತಿ ಕುಟುಂಬದಿಂದ ೪ ತಂಡಗಳವರೆಗೆ ಅವಕಾಶವಿದೆ. ವಿಜೇತರಿಗೆ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಇದರೊಂದಿಗೆ ಮುಕ್ತವಾಗಿ ಏರ್‌ಗನ್ ಸ್ಪರ್ಧೆಯೂ ಇದೆ. ಆಗಸ್ಟ್ ೧೬ರಿಂದ ಚಿಟಚಿಜಚಿ-ಞಞಚಿ.ಟಿಟಟಿ ನಲ್ಲಿ ಆನ್‌ಲೈನ್ ನೋಂದಣಿ ಆರಂಭವಾಗಲಿದೆ. ತಮ್ಮಯ್ಯ-೯೭೪೧೨೦೩೧೨೩, ಬೋಪಣ್ಣ- ೯೯೦೧೨೨೧೯೪೫ ಸಂಖ್ಯೆಯನ್ನು ಸಂಪರ್ಕಿಸಬಹುದು.
ಸೆ.೩೦ ಕೊನೆ ದಿನ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಸಾಧಕರನ್ನು ಸನ್ಮಾನಿಸಲಾಗುವುದು. ಸುದ್ದಿಗೋಷ್ಠಿಯಲ್ಲಿ ತೋಕ್ ನಮ್ಮೆಯ ಅಧ್ಯಕ್ಷ ಆಲೇಮಾಡ ಎ.ಟಿ.ಸೋಮಣ್ಣ, ಪ್ರಮುಖರಾದ ಎ.ಟಿ.ಪೂವಯ್ಯ, ಬೋಪಣ್ಣ, ನವೀನ್ ಉಪಸ್ಥಿತರಿದ್ದರು.