ಕುಶಾಲನಗರ :ರಸ್ತೆಯಲ್ಲಿ ವಿರುದ್ಧ ದಿಕ್ಕಿಗೆ ವಾಹನಗಳ ಸಂಚಾರ: ಆಟೋ ರಿಕ್ಷಾ ಮತ್ತು ಸ್ಕೂಟಿ ನಡುವೆ ಅಪಘಾತ

Aug 8, 2026 - 20:32
 0  495
ಕುಶಾಲನಗರ :ರಸ್ತೆಯಲ್ಲಿ ವಿರುದ್ಧ ದಿಕ್ಕಿಗೆ ವಾಹನಗಳ ಸಂಚಾರ: ಆಟೋ ರಿಕ್ಷಾ ಮತ್ತು ಸ್ಕೂಟಿ ನಡುವೆ ಅಪಘಾತ

ಕುಶಾಲನಗರ ಆ.9 : ಕುಶಾಲನಗರದ ಸೋಮೇಶ್ವರ ದೇವಾಲಯ ಎದುರಿನ ರಾಜ್ಯ ಹೆದ್ದಾರಿಯ ವಿಭಜಕದಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನಗಳು ಅತಿ ವೇಗ ಹಾಗೂ ಕೆಲವರು ಆಜಾಗರೂಕತೆಯಿಂದ ವಾಹನ ಚಲಾಯಿಸುತ್ತಿರುವುದು ಕಂಡುಬಂದಿದೆ.

ಇದಕ್ಕೆ ಪೂರಕವೆಂಬಂತೆ ಶನಿವಾರ ಸಂಜೆ 7 ಗಂಟೆಗೆ ವಿರುದ್ಧ ದಿಕ್ಕಿನಲ್ಲಿ ಬಂದ ಆಟೋರಿಕ್ಷಾವೊಂದು ಸ್ಕೂಟಿಗೆ ಡಿಕ್ಕಿಯಾಗಿ ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿರುವುದಿಲ್ಲ. ಆಟೋರಿಕ್ಷಾವನ್ನು ರಸ್ತೆಯ ಕೆಳಬದಿ ಇಳಿಸಲು ಪಾದಚಾರಿ ಮಾರ್ಗದಲ್ಲಿ ಹಾಕಲಾಗಿದ್ದ ವಸ್ತುಗಳ ಅಡಚಣೆಯಿಂದ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಬಗ್ಗೆ ಪುರಸಭೆಯವರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0