Kodagu

ಮಡಿಕೇರಿಯಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ದುರಂತ: ಟ್ಯಾಕ್ಸಿ ಚಾಲಕ ದುರ್ಮರಣ

admincoorgdaily

ಮಡಿಕೇರಿಯಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ದುರಂತ: ಟ್ಯಾಕ್ಸಿ ಚಾಲಕ ದುರ್ಮರಣ

ಮಡಿಕೇರಿ; ನಗರದ ಜನರಲ್ ತಿಮ್ಮಯ್ಯ ಸರ್ಕಲ್ ಬಳಿ ಶನಿವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟ್ಯಾಕ್ಸಿ ಚಾಲಕ ಶಾಹಿಲ್ ಎಂಬವರು ಮೃತಪಟ್ಟಿದ್ದಾರೆ. ಶಾಹಿಲ್ ಅವರ ಮೇಲೆ ಲಾರಿಯೊಂದು ಹತ್ತಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಂಗಳೂರು ರಸ್ತೆಯಿಂದ ಬಂದ ಗ್ಯಾಸ್ ಟ್ಯಾಂಕರ್ ಡಿಕ್ಕಿ ಪಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.