Kodagu

ಸಣ್ಣ ಕೈಗಾರಿಕಾ ಉದ್ಯಮದಾರರಿಗೆ ತರಬೇತಿ ಕಾರ್ಯಗಾರ

admincoorgdaily

ಸಣ್ಣ ಕೈಗಾರಿಕಾ ಉದ್ಯಮದಾರರಿಗೆ ತರಬೇತಿ ಕಾರ್ಯಗಾರ

ಮಡಿಕೇರಿ ಜ.07:-ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ (ಕೆಸಿಟಿಯು), ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ (ಟೆಕ್ಸಾಕ್), ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಡಿಕೇರಿ, ಇವರ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ರೈಸಿಂಗ್ ಅಂಡ್ ಎಕ್ಸಲರೇಟಿಂಗ್ ಎಂಎಸ್‍ಎಂಇ ಫರ್‍ಫಾರ್ಮೆನ್ಸ್ (ರ್ಯಾಂಪ್) ರಡಿ ಜೀರೋ ಡಿಪೆಕ್ಟ್ ಅಂಡ್ ಜೀರೋ ಇಪೆಕ್ಟ್ ಮತ್ತು ಎಲ್‍ಇಎಎನ್ ಯೋಜನೆ ಕುರಿತು ಕುಶಾಲನಗರದ ಪಾಳ್ಯಂ ಎಮರಾಲ್ಡ್ ಸಭಾಂಗಣದಲ್ಲಿ ಎಂಎಸ್‍ಎಂಇ ಉದ್ದಿಮೆದಾರರಿಗೆ ಒಂದು ದಿನದ ಅರಿವು ಕಾರ್ಯಾಗಾರ ಬುಧವಾರ ನಡೆಯಿತು.

ಕಾರ್ಯಾಗಾರವನ್ನು ಕುಶಾಲನಗರ ಕೂಡ್ಲೂರು ಕೈಗಾರಿಕಾ ಪ್ರದೇಶದ ಉದ್ದಿಮೆದಾರರ ಸಂಘದ ಅಧ್ಯಕ್ಷರಾದ ಪ್ರವೀಣ್ ಎ.ಎನ್. ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಬಿ.ಆರ್. ನಾಗೇಂದ್ರಪ್ರಸಾದ್, ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಬೆಂಗಳೂರು ಟೆಕ್ಸಾಕ್ ಮುಖ್ಯ ಸಲಹೆಗಾರರು ಹಾಗೂ ಸಿಇಒ ಸಿದ್ದರಾಜು ಅವರು ರ್ಯಾಂಪ್ ಯೋಜನೆಯ ಬಗ್ಗೆ ಪ್ರಸ್ತಾವಿಕ ಭಾಷಣವನ್ನು ಮಾಡಿದರು.

ಸಭೆಯಲ್ಲಿ ಮುಖ್ಯ ಅಥಿತಿಗಳಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಕೆ. ಹನುಮಂತರಾಯ, ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ಗಂಗಾಧರ್ ನಾಯಕ್ ಪಿ., ಕೆ.ಎಸ್.ಎಫ್.ಸಿ, ಅಧಿಕಾರಿಗಳು, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರಾದ ಸಿ.ಎನ್.ರಘು ಉಪಸ್ಥಿತರಿದ್ದರು. ಜೀರೋ ಡಿಪೆಕ್ಟ್ ಅಂಡ್ ಜೀರೋ ಇಪೆಕ್ಟ್ ಮತ್ತು ಎಲ್‍ಇಎಎನ್ ಯೋಜನೆಯ ಕಾರ್ಯಾಗಾರದ ಬಗ್ಗೆ ಮಾನವ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಕ್ರಿಯಟಿವ್ ಇಂಪೆಕ್ಸ್ ಶ್ರೀಕಾಂತ್ ಬಿ. ವಿವರವಾದ ತಾಂತ್ರಿಕ ಉಪನ್ಯಾಸ ನೀಡಿದರು.