ಆದೇಶ ಉಲ್ಲಂಘಿಸಿ ಮರದ ದಿಮ್ಮಿಗಳ ಸಾಗಾಟ:40,500 ರೂ ದಂಡ
admincoorgdaily

ಶನಿವಾರಸಂತೆ: ಕೊಡಗು ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಶನಿವಾರಸಂತೆ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಲಾರಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ (RTO) ಮಡಿಕೇರಿಗೆ ಹಸ್ತಾಂತರಿಸಲಾಗಿದ್ದು, ಸಾರಿಗೆ ಇಲಾಖೆ ವತಿಯಿಂದ ರೂ. 40,500/ ದಂಡ ವಿಧಿಸಲಾಗಿದೆ.