ಕಟ್ಟೆಮಾಡು ಸಕಾ೯ರಿ ಶಾಲೆಯಲ್ಲಿ ಹಿರಿಯ ಜೀವಿಗಳಿಗೆ ಗೌರವ ನಮನ
admincoorgdaily

ಮಡಿಕೇರಿ: ಎಸ್. ಕಟ್ಟೆಮಾಡು ಸಕ೯ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು. ಕಟ್ಟೆಮಾಡು ಗ್ರಾಮದ ಕಳ್ಳೀರ ಗಣಪತಿ, ಬಿದ್ರುಪಣೆ ಬೋಜಪ್ಪ ಹಾಗೂ ನಂದೇಟಿರ ದೇವಯ್ಯ ಅವರನ್ನು ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಲಾಯಿತು.
ವ್ಯಕ್ತಿ ಪರಿಚಯವನ್ನು ಶಾಲೆಯ ಮುಖ್ಯ ಶಿಕ್ಷಕಿಬಿಂದು ಹಾಗೂ ಪ್ರೀತ ಮಾಡಿದರು. ಸನ್ಮಾನ ಸ್ವೀಕರಿಸಿದ ಕಳ್ಳಿರ ಗಣಪತಿ ಅವರು ತಮ್ಮ ಬಾಲ್ಯದ ಕಠಿಣ ಪರಿಶ್ರಮ ಮಾಡಿದರು. ವಿದ್ಯಾರ್ಥಿಗಳು ಹಿರಿಯರನ್ನು ಗೌರವಿಸಬೇಕು ಎಂದು ಕಿವಿಮಾತು ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಂದೇಟಿರ ದೇವಯ್ಯ ತಮ್ಮ ಬಾಲ್ಯ,ಸೇನಾ ಅನುಭವದ ಬಗ್ಗೆ ತಿಳಿಸಿದರು.
ಮಿಸ್ಟ್ ಹಿಲ್ಸ್ ನಿದೇ೯ಶಕ ಕಟ್ಟೆಮನೆ ಸೋನಾಜಿತ್ ಹಿರಿಯ ನಾಗರಿಕರ ದಿನದ ಮಹತ್ವದ ಕುರಿತು ಮಾತನಾಡಿದರು. ಶಿಕ್ಷಕಿ ಪ್ರೀತ ಹಿರಿಯ ಜೀವಿಗಳ ಕುರಿಾದ ತಮ್ಮ ಅನಿಸಿಕೆ ಹಂಚಿಕೊಂಡರು. ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ತಮ್ಮಯ್ಯ ಅಧ್ಯಕ್ಷತೆಯ ಕಾಯ೯ಕ್ರಮದಲ್ಲಿ ಮಿಸ್ಟಿ ಹಿಲ್ಸ್ ನಿದೇ೯ಶಕರಾದ ಕೊಚನ ಲವಿನ ಕಾಂಗಿರ ಸತೀಶ್, ಮನೋಜ್ ಕುಮಾರ್ ಉಪಸ್ಥಿತರಿದ್ದರು . ಶಿಕ್ಷಕಿ ಸಂಧ್ಯಾ ನಿರೂಪಿಸಿ, .ಸನ್ಮಾನಿತರ ಪರಿಚಯವನ್ನು ಮುಖ್ಯಶಿಕ್ಷಕಿ ಬಿಂದು ಮತ್ತು ಪ್ರೀತ ನೆರವೇರಿಸಿದರು.ಹಿರಿಯರ ಅಗತ್ಯತೆ ಬಗ್ಗೆ ಶಾಲಾ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.