ಟ್ರಿಪಲ್ ರೈಡ್ ವಿಡಿಯೋ ವೈರಲ್ :ಮಡಿಕೇರಿಯಲ್ಲಿ ಬಿತ್ತು ದಂಡ
ಮಡಿಕೇರಿ: ಅಬ್ಬಿ ಜಲಪಾತದ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಮೂವರು ಸಂಚರಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದ್ದಂತೆ ತಕ್ಷಣ ಕಾರ್ಯ ಪ್ರವೃತ ರಾದ ಮಡಿಕೇರಿ ಸಂಚಾರಿ ಪೊಲೀಸರು ವಾಹನ ಸಂಖ್ಯೆ KA12-ಸಿ 0648 ಸಂಖ್ಯೆ ವಾಹನ ಪತ್ತೆಹಚ್ಚಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕಾರ ವಾಹನ ಮಾಲೀಕ ಕುಶಾಲನಗರ ಮೂಲದ ಓಂ ಶರ್ಮರಿಗೆ 500 ದಂಡ ವಿಧಿಸಲಾಗಿದೆ.