ಗಣೇಶ ಮೆರವಣಿಗೆ ವೇಳೆ‌ ನುಗ್ಗಿದ ಟ್ರಕ್: ಐದು ಮಂದಿ ಸಾವು

Sep 12, 2025 - 22:22
Sep 12, 2025 - 22:23
 0  1.9k
ಗಣೇಶ ಮೆರವಣಿಗೆ ವೇಳೆ‌ ನುಗ್ಗಿದ ಟ್ರಕ್: ಐದು ಮಂದಿ ಸಾವು

ಹಾಸನ : ಹೊಳೆನರಸೀಪುರ ನಡುವಿನ ಮೊಸಳೆ ಹೊಸಳ್ಳಿ ಬಳಿ ಗಣೇಶ ಮೆರವಣಿಗೆ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮೆರವಣಿಗೆ ಮೇಲೆ ನುಗ್ಗಿದ ಕ್ಯಾಂಟರ್ ಲಾರಿಗೆ ಸಿಲುಕಿ ಸುಮಾರು 5 ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೊಸಳೆ ಹೊಸಳ್ಳಿ ರಸ್ತೆಯಲ್ಲಿ ಗಣೇಶ ವಿಸರ್ಜನೆಗೆ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿದ ಕ್ಯಾಂಟರ್ ನುಗ್ಗಿದ ಪರಿಣಾಮ ಈ ಘಟನೆ ಸಂಭವಿಸಿದೆ. ಸುಮಾರು 25ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು ಮೃತರ ಸಂಖ್ಯೆ ಹೆಚ್ಚಾಗುವ ಸಂಭವವಿದೆ. ಗಾಯಾಳುಗಳನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

What's Your Reaction?

Like Like 0
Dislike Dislike 0
Love Love 2
Funny Funny 0
Angry Angry 1
Sad Sad 7
Wow Wow 1