ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ನೂತನ ಕೊಡಗು ಸಮಿತಿ ರಚನೆ : ಅಧ್ಯಕ್ಷರಾಗಿ ಬಿ.ಬಿ.ಐತ್ತಪ್ಪ ರೈ ಆಯ್ಕೆ

Aug 2, 2026 - 22:09
 0  1
ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ನೂತನ ಕೊಡಗು ಸಮಿತಿ ರಚನೆ : ಅಧ್ಯಕ್ಷರಾಗಿ ಬಿ.ಬಿ.ಐತ್ತಪ್ಪ ರೈ ಆಯ್ಕೆ

ಮಡಿಕೇರಿ ಆ.2 : ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ನ ನೂತನ ಕೊಡಗು ಜಿಲ್ಲಾ ಸಮಿತಿಯನ್ನು ರಚಿಸಲಾಗಿದ್ದು, ಜಿಲ್ಲಾಧ್ಯಕ್ಷರಾಗಿ ಬಿ.ಬಿ.ಐತ್ತಪ್ಪ ರೈ ಆಯ್ಕೆಯಾಗಿದ್ದಾರೆ.

ಗೌರವ ಅಧ್ಯಕ್ಷರಾಗಿ ಶೇಖರ್ ಭಂಡಾರಿ, ಉಪಾಧ್ಯಕ್ಷರುಗಳಾಗಿ ಬಿ.ವೈ.ಆನಂದ ರಘು, ಬಿ.ಕೆ.ಮೋಹನ, ಬಿ.ಶಿವಪ್ಪ, ಜಿಲ್ಲಾ ಪ್ರಧಾನ ಸಂಚಾಲಕರಾಗಿ ಪಿ.ಎಂ.ರವಿ ಮೊಗೇರ, ಪ್ರಧಾನ ಕಾರ್ಯದರ್ಶಿಯಾಗಿ ರಾಜೀವ ಲೋಚನ ಬಿ.ಪಿ., ಕೋಶಾಧಿಕಾರಿ ರತ್ನಾಕರ ರೈ, ಜಿಲ್ಲಾ ಸಲಹೆಗಾರರಾಗಿ ಅಶೋಕ್ ಆಚಾರ್ಯ ಬಿ.ಸಿ., ತಾಲ್ಲೂಕು ಸಂಚಾಲಕರಾಗಿ ಮಡಿಕೇರಿಯ ಸುರೇಶ್ ಕುಲಾಲ್, ವಿರಾಜಪೇಟೆ ಶಬರೀಶ್ ಶೆಟ್ಟಿ, ಕುಶಾಲನಗರದ ಗೌತಮ ಶಿವಪ್ಪ, ಪೊನ್ನಂಪೇಟೆಯ ಶೇಖರ್ ಭಂಡಾರಿ ಹಾಗೂ ಸೋಮವಾರಪೇಟೆಯ ದಾಮೋದರ ಬಿ.ಎಂ. ಆಯ್ಕೆಯಾದರು.

ಯುವ ಘಟಕದ ಅಧ್ಯಕ್ಷರಾಗಿ ಶರದ್ ಶೆಟ್ಟಿ, ಮಹಿಳಾ ವಿಭಾಗದ ಗೌರವ ಅಧ್ಯಕ್ಷರಾಗಿ ವಿಜಯಲಕ್ಷಿ, ಅಧ್ಯಕ್ಷರಾಗಿ ಲೀಲಾ ಶೇಷಮ್ಮ, ಉಪಾಧ್ಯಕ್ಷರಾಗಿ ಶಶಿಕಲಾ ರೈ, ಪ್ರಧಾನ ಕಾರ್ಯದರ್ಶಿಯಾಗಿ ಶೋಭಾ ಮುತ್ತಪ್ಪ, ಕೋಶಾಧಿಕಾರಿಯಾಗಿ ಸಾವಿತ್ರಿ ಹಾಗೂ ಸಲಹೆಗಾರರಾಗಿ ಲೀಲಾವತಿ ಬಿ.ಎಸ್. ನೇಮಕಗೊಂಡರು. 

ಮಡಿಕೇರಿಯಲ್ಲಿ ನಡೆದ ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ನ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ನ ಕರ್ನಾಟಕ ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಅರವಿಂದ ಬೆಲ್ಚಡ, ತುಳುವರ್ಲ್ಡ್ ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿ ವಸಂತ ರೈ ಕುತ್ತೆತ್ತೂರು ಹಾಗೂ ನಿರ್ದೇಶಕ ಡಾ.ರಾಜೇಶ್ ಕೃಷ್ಣ ಆಳ್ವ ಉಪಸ್ಥಿತರಿದ್ದರು. 

ಡಾ.ರಾಜೇಶ್ ಕೃಷ್ಣ ಆಳ್ವ ಅವರು ಮಾತನಾಡಿ ತುಳುವರ್ಲ್ಡ್ ಫೌಂಡೇಶನ್ ಹಾಗೂ ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ನ ಉದ್ದೇಶಗಳು, ಪಾತ್ರ ಮತ್ತು ಜವಾಬ್ದಾರಿಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು.

ಸಮಾಲೋಚನೆ ಹಾಗೂ ಚರ್ಚೆಯ ನಂತರ ಸರ್ವಾನುಮತದಿಂದ ನೂತನ ಕಾರ್ಯಕಾರಿ ಸಮಿತಿಯನ್ನು ಅನುಮೋದಿಸಲಾಯಿತು.

ದೇವೇಂದ್ರ ಹೆಗ್ಡೆ ಅವರು ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿ, ಮುಂದಿನ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದರು. ಪಿ.ಎಂ.ರವಿ ಮೊಗೇರ ಅವರು ಸ್ವಾಗತಿಸಿ ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0