ವೈದ್ಯಕೀಯ ಕೋರ್ಸ್ ಗೆ ಆಯ್ಕೆಯಾದ ಅವಳಿ ಸೋದರಿಯರಿಗೆ ಸನ್ಮಾನ

Jul 25, 2026 - 15:00
 0  253
ವೈದ್ಯಕೀಯ ಕೋರ್ಸ್ ಗೆ  ಆಯ್ಕೆಯಾದ ಅವಳಿ ಸೋದರಿಯರಿಗೆ ಸನ್ಮಾನ

ಕುಶಾಲನಗರ : ಇಲ್ಲಿನ ನಾಗೇಗೌಡ ಬಡಾವಣೆಯ ನಿವಾಸಿ ನಿವೃತ್ತ ಉಪನ್ಯಾಸಕರಾದ ಎಸ್.ವಿ‌.ಮಲ್ಲೇಶ್ ಹಾಗೂ ಶಾಂಭವೇಣಿ ಅವರ ಅವಳಿ ಪುತ್ರಿಯರಾದ ಎಂ. ಸಿಂಧು ಹಾಗೂ ಎಂ.ಸಿರಿ ಸೋದರಿಯರು ನೀಟ್ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದು ವೈದ್ಯಕೀಯ ಕೋರ್ಸ್ ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ವೀರಶೈವ ಮಹಾಸಭಾದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

 ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಪ್ರಧಾನ ಕಾರ್ಯದರ್ಶಿ ಶಾಂಬಶಿವಯ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಸರೋಜಾ ಆರಾಧ್ಯ, ನಿವೃತ್ತ ಉಪನ್ಯಾಸಕರಾದ ಸಬಲಂ ಭೋಚಣ್ಣರೆಡ್ಡಿ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0