Kodagu

ದೇವರಕೊಲ್ಲಿ ಬಳಿ ಕಾರು-ಲಾರಿ ಮಧ್ಯೆ ಅಪಘಾತ: ಇಬ್ಬರು ಸಾವು

admincoorgdaily

ಮಡಿಕೇರಿ:ಕಾರು- ಲಾರಿ ಮಧ್ಯೆ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಡಿಕೇರಿ ತಾಲ್ಲೂಕಿನ ದೇವರಕೊಲ್ಲಿ ಬಳಿ ನಡೆದಿದೆ. ಮತ್ತಿಬ್ಬರು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಘಟನೆ ನಡೆದಿದೆ. ಗಾಯಾಳುಗಳು ಸುಳ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.