ಒಂದೇ ಸ್ಥಳದಲ್ಲಿ ಎರಡು ಪ್ರತ್ಯೇಕ ಅಪಘಾತ:ನಾಲ್ಕು ವಾಹನಗಳ ನಡುವೆ ಡಿಕ್ಕಿ
ಸುಂಟಿಕೊಪ್ಪ: ರಾಷ್ಟ್ರೀಯ ಹೆದ್ದಾರಿಯ ಬಿರ್ಚಿ ವುಡ್ ರೆಸಾರ್ಟ್ ಸಮೀಪದ ತಿರುವಿನಲ್ಲಿ ಶುಕ್ರವಾರ ನಾಲ್ಕು ವಾಹನಗಳ ನಡುವೆ ಎರಡು ಪ್ರತ್ಯೇಕ ಅಪಘಾತ ಸಂಭವಿಸಿದ್ದು ಯಾವುದೇ ಪ್ರಾಣಹಾನಿ ಉಂಟಾಗಿಲ್ಲ.
ಶುಕ್ರವಾರ ಬೆಳಿಗ್ಗೆ ಕುಶಾಲನಗರ ಕಡೆಯಿಂದ ಸುಂಟಿಕೊಪ್ಪ ಕಡೆಗೆ ಬರುತ್ತಿದ್ದ ಕಾರು ಮತ್ತು ಮಡಿಕೇರಿಯಿಂದ ಕುಶಾಲನಗರದತ್ತ ತೆರಳುತ್ತಿದ್ದ ಬೈಕ್ ನಡುವೆ ಡಿಕ್ಕಿ ಸಭವಿಸಿದೆ. ಬೈಕ್ ನಲ್ಲಿದ್ದ ಹೈದರಾಬಾದ್ ನ ಪ್ರವಾಸಿ ದಂಪತಿ ಹಾಗೂ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದೇ ಸ್ಥಳದಲ್ಲಿ ಮತ್ತೊಂದು ಅಪಘಾತ ಉಂಟಾಗಿದೆ. ಸಂಜೆ ವೇಳೆ ಹುಂಡೈ ಕಾರು ಹಾಗೂ ಜಿಪ್ಸಿ ವಾಹನದ ನಡುವೆ ಅಪಘಾತ ಸಂಭವಿಸಿ ರಸ್ತೆ ಬದಿಗೆ ಮಗುಚಿಕೊಂಡಿವೆ. ಈ ವಾಹನಗಳಲ್ಲಿದ್ದವರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
What's Your Reaction?
Like
0
Dislike
0
Love
0
Funny
0
Angry
0
Sad
4
Wow
1
