ಟಿಂಬರ್ ಯೂನಿಯನ್ ಸಭೆಯಲ್ಲಿ ಇಬ್ಬರ ಮೇಲೆ ಚಾಕು ಇರಿತ

Jun 20, 2026 - 09:08
 0  1.7k
ಟಿಂಬರ್ ಯೂನಿಯನ್ ಸಭೆಯಲ್ಲಿ ಇಬ್ಬರ ಮೇಲೆ ಚಾಕು ಇರಿತ
AI image

ಸಿದ್ದಾಪುರ:ಸಿದ್ದಾಪುರದಲ್ಲಿ ಶುಕ್ರವಾರ ನಡೆದ ಟಿಂಬರ್ ಯೂನಿಯನ್ ಸಭೆಯಲ್ಲಿ ಸದಸ್ಯತ್ವ ಹಣ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆಯಲ್ಲಿ ಇಬ್ಬರ ಮೇಲೆ ಚಾಕು ದಾಳಿ ನಡೆದಿದೆ.

 ಈ ಸಂಬಂಧ 5 ಜನರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಯೂನಿಯನ್ ಸದಸ್ಯತ್ವ ಹಣದ ವಿಚಾರವಾಗಿ ಸಭೆಯಲ್ಲಿ ವಾಗ್ವಾದ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಇಬ್ಬರ ಮೇಲೆ ಚಾಕು ಇರಿದಿದ್ದಾರೆ. ಈ ಸಂಬಂಧ ಮೂಸಾ, ಸಿರಾಜ್, ಸಜಾದ್, ಕಬೀರ್, ಫಿರೋಜ್ ಎಂಬವರ ವಿರುದ್ಧ ಅರ್ಫಾನ್ ಅಹಮ್ಮದ್ ಅವರು ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 1