ಯು.ಟಿ. ಖಾದರ್‌ಗೆ ಆರೋಗ್ಯ ಖಾತೆಯೊಂದಿಗೆ ಅಲ್ಪಸಂಖ್ಯಾತ, ವಕ್ಫ್ ಖಾತೆ ಜವಾಬ್ದಾರಿ:ಆಡಳಿತದಲ್ಲಿ ಹೊಸ ಚೈತನ್ಯ" -ಕಾಂಗ್ರೆಸ್ ಮುಖಂಡ ಎಂ.ಇ. ಅಶ್ರಫ್`
admincoorgdaily

ಮಡಿಕೇರಿ; ಯು.ಟಿ. ಖಾದರ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಜ್ ಖಾತೆಗಳ ಜವಾಬ್ದಾರಿ ದೊರೆತಿರುವುದು ಅತ್ಯಂತ ಸಂತಸದ ಸಂಗತಿ. ಜನರ ನಾಡಿಮಿಡಿತ ಅರಿತಿರುವ ಅನುಭವಿ ನಾಯಕನಿಗೆ ಈ ಮಹತ್ವದ ಖಾತೆಗಳು ದೊರೆತಿರುವುದರಿಂದ, ಆಡಳಿತದಲ್ಲಿ ಹೊಸ ಚೈತನ್ಯ ಮೂಡಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಮುಖಂಡ ಎಂ.ಇ ಅಶ್ರಫ್ ಸೋಮವಾರಪೇಟೆ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಶೇಷವಾಗಿ ಆರೋಗ್ಯ ಸೇವೆ ಇನ್ನಷ್ಟು ಜನಸ್ನೇಹಿಯಾಗಲಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಕ್ಷೇತ್ರದಲ್ಲಿ ಪಾರದರ್ಶಕತೆ ಹಾಗೂ ಅಭಿವೃದ್ಧಿಗೆ ಹೊಸ ದಿಕ್ಕು ಸಿಗಲಿ ಎಂಬ ನಿರೀಕ್ಷೆ ನಮ್ಮದು. ಯಾವ ಖಾತೆ ನೀಡಿದರೂ ಅದನ್ನು ಜನಪರವಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ನಾಯಕ ಯು.ಟಿ. ಖಾದರ್ ಅವರದ್ದು, ಕೊಡಗಿನಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ಸಚಿವರು ಆಗಿರುವುದರಿಂದ ಕೊಡಗಿಗೂ ಸಹ ಉತ್ತಮ ಕೆಲಸ ಆಗುತ್ತದೆ ಎಂಬ ನಿರೀಕ್ಷೆ ಎಂದು ಅವರು ತಿಳಿಸಿದ್ದಾರೆ.