ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಅನಧಿಕೃತ ಸಮಾಧಿ:ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ
ಸಿದ್ದಾಪುರ;ಮಾಲ್ದಾರೆ ಸಮೀಪದ ಮತ್ತೂರು ಬಳಿಯ ಇತಿಹಾಸ ಪ್ರಸಿದ್ಧ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಕೆಲವು ದುಷ್ಕರ್ಮಿಗಳು ಅನಧಿಕೃತ ಸಮಾಧಿ (ಗೋರಿ) ನಿರ್ಮಾಣ ಮಾಡಿ ಶಾಂತಿಭಂಗ ಮಾಡಿರುವ ಘಟನೆ ಸಂಬಂಧಿಸಿದಂತೆ ಇಂದು ಹಿಂದು ಪರ ಸಂಘಟನೆ ಕಾರ್ಯಕರ್ತರು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಇದೆಏಸಂದರ್ಭ ಪೊಲೀಸ್ ಹಾಗು ಅರಣ್ಯ ಇಲಾಖೆಯ ಮೂಲಕ ಗೋರಿಯನ್ನು ತೆರವುಗೊಳಿಸಲಾಯಿತು. ಗೋರಿಯನ್ನು ಒಡೆದಾಗ ಒಳಗಡೆ ಮೃತ ದೇಹದ ಬದಲು ಕಲ್ಲು ಮಣ್ಣು ತುಂಬಿಸಿ ಗೋರಿ ನಿರ್ಮಿಸಿ ಮೆಲ್ಬಾಗದಲ್ಲಿ ಹೂವಿನ ಹಾರ ಹಾಕಲಾಗಿದ್ದದನ್ನು ತೆರವು ಗೊಳಿಸಲಾಯಿತು. ಹಿಂದು ಪರ ಸಂಘಟನೆಯ ಚೆಕ್ಕೇರ ಮನು, ಶಾಂತಿಯoಡ, ರವಿ ಕುಶಾಲಪ್ಪ, ಮುಂತಾದ ಪ್ರಮುಖರು ಭಾಗವಹಿಸಿ ಘಟನೆಯನ್ನು ಖಂಡಿಸಿ ನೆರೆದಿದ ಸ್ಥಳೀಯರನ್ನು ಹಾಗು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಸಿದ್ದಾಪುರ ಪೊಲೀಸರು ಕಿಡಿಗೇಡಿಗಳನ್ನು ಬಂಧಿಸಲು ಸಕಲಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
