ಗೋಣಿಕೊಪ್ಪ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

Aug 20, 2026 - 17:41
 0  0
ಗೋಣಿಕೊಪ್ಪ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ  ಸಮವಸ್ತ್ರ ವಿತರಣೆ

ಗೋಣಿಕೊಪ್ಪ: ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ವಿಶೇಷವಾದ ಸಮವಸ್ತ್ರವನ್ನು ವಿತರಿಸಲಾಯಿತು. ಶಾಲೆಯ ವಿವೇಕ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪೋಷಕರ ಸಹಕಾರದೊಂದಿಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವರಿ ಸಮಿತಿ ಮತ್ತು ಶಿಕ್ಷಕರುಗಳು ವಿದ್ಯಾರ್ಥಿಗಳಿಗಾಗಿ ಹೊಸ ಬಣ್ಣದಲ್ಲಿ ಗುರುತಿಸಿದ ಸಮವಸ್ತ್ರವನ್ನು ಗೋಣಿಕೊಪ್ಪ ರೋಟರಿ ಸಂಸ್ಥೆಯ ಅಧ್ಯಕ್ಷ, ಪ್ರಮೋದ್ ಕಾಮತ್ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ರೋಟರಿ ಸಂಸ್ಥೆಯ ಅಧ್ಯಕ್ಷ ಪ್ರಮೋದ್ ಕಾಮತ್, ವಿದ್ಯಾರ್ಥಿಗಳು ಕಲಿಕೆಗೆ ಪ್ರೇರಣೆಯಾಗಲು ಸಮವಸ್ತ್ರಗಳು ಸಹ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಶಾಲೆಯ ಎಸ್‌ಡಿಎಂಸಿ ಸಮಿತಿ ಮತ್ತು ಶಿಕ್ಷಕರುಗಳು ಈ ಕಾರ್ಯವನ್ನು ಅತ್ಯುತ್ತಮವಾಗಿ ಮಾಡಿದ್ದಾರೆ. ಹಳದಿ ಬಣ್ಣದ ಸಮವಸ್ತ್ರ ಮಕ್ಕಳನ್ನು ಆಕರ್ಷಣೆಯಾಗಿ ಕಾಣಿಸುವಂತೆ ಮಾಡಿದೆ. ಈ ಪ್ರಯತ್ನ ಶ್ಲಾಘನೀಯ ಬೆಳವಣಿಗೆ ಎಂದು ಹೇಳಿದರು.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಮತ್ತು ಏಕತಾ ಮನೋಭಾವವನ್ನು ಬೆಳೆಸುವ ಉದ್ದೇಶಕ್ಕೆ ಹೊಸ ಬಣ್ಣದ ಸಮವಸ್ತ್ರವನ್ನು ವಾರದ ಎರಡು ದಿನಗಳಲ್ಲಿ ಧರಿಸುವಂತೆ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಓದುವ ಕಲಿಕೆಗೆ ಹೊಸ ಹುರುಪು ಮತ್ತು ವಿದ್ಯಾರ್ಥಿಗಳು ಚಂದವಾಗಿ ಕಾಣಿಸಿಕೊಳ್ಳಲು ಅನುಕೂಲಕರವಾಗುತ್ತದೆ. ಸರ್ಕಾರಿ ಶಾಲೆಯನ್ನು ಜನರು ಗುರುತಿಸಲು ಇದರ ಪ್ರಯೋಜನ ಅಗತ್ಯ ಎಂದು ತಿಳಿಸಿದರು.

ಶಾಲೆಯ ಮುಖ್ಯ ಶಿಕ್ಷಕ ಎಚ್ ಕೆ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಏಕ ಮನಸ್ಥಿತಿಯನ್ನು ಪ್ರತಿಷ್ಠಾಪಿಸುವುದು ಬಹು ಮುಖ್ಯ. ಆ ನಿಟ್ಟಿನಲ್ಲಿ ಸರ್ಕಾರ ಸಮವಸ್ತ್ರವನ್ನು ನೀಡುತ್ತಿದ್ದರೂ, ಅದರ ಮತ್ತೊಂದು ಪ್ರಯೋಜನಕಾರಿ ಕಾರ್ಯಕ್ರಮವಾಗಿ ವಾರದ ಎರಡು ದಿನಗಳು ತಮ್ಮದೇ ಇಷ್ಟದ ಬಣ್ಣದ ಸಮವಸ್ತ್ರವನ್ನು ಆಕರ್ಷಣೆ ಮತ್ತು ವಿಶೇಷವಾಗಿ ಧರಿಸಲು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಪೋಷಕರ ಸಹಕಾರದೊಂದಿಗೆ ಈ ಕಾರ್ಯವನ್ನು ಅನುಷ್ಠಾನಕ್ಕೆ ತಂದು ಪ್ರತಿ ವಿದ್ಯಾರ್ಥಿಗೂ ಶನಿವಾರ ಮತ್ತು ಬುಧವಾರದಂದು ಸಮಸ್ತ್ರ ಧರಿಸುವಂತೆ ವ್ಯವಸ್ಥೆ ಮಾಡಲಾಗಿದೆ.

ಸರ್ಕಾರಿ ಶಾಲೆಯ ಮಕ್ಕಳು ಸಹ ಖಾಸಗಿ ಶಾಲೆಗಳಂತೆ ಕಾಣಿಸಿಕೊಳ್ಳಬೇಕೆಂಬ ಉದ್ದೇಶ ಗೊಂದಲಾಗಿದೆ ಎಂದು ಹೇಳಿದರು. ನಿವೃತ್ತ ಸೈನಿಕ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಣಿಕಂಠ, ಹಿರಿಯ ಶಿಕ್ಷಕರುಗಳಾದ ದಮಯಂತಿ, ಇಂದಿರಾ, ಅನಿತಾ ಕುಮಾರಿ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0