ಯುನೈಟೆಡ್ ಕೊಡಗು ಸಂಘದಿಂದ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

Jun 22, 2026 - 17:52
 0  202
ಯುನೈಟೆಡ್ ಕೊಡಗು ಸಂಘದಿಂದ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ಸಿದ್ದಾಪುರ : ಇಲ್ಲಿನ ಯುನೈಟೆಡ್ ಕೊಡಗು ಸಂಘದ ವತಿಯಿಂದ ಸಿದ್ದಾಪುರ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು.

 ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ಝಿಯಾದ್, ಸಂಘದ ವತಿಯಿಂದ ಸುಮಾರು 16 ಮಂದಿ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಸಮವಸ್ತ್ರ ವಿತರಿಸಲಾಗಿದ್ದು, ಮುಂದೆ ಮತ್ತಷ್ಟು ಸಾಮಾಜಿಕ ಕಾರ್ಯಗಳಲ್ಲಿ ಸಂಘಟನೆಯನ್ನು ತೊಡಗಿಸಿಕೊಳ್ಳಲಿರುವುದಾಗಿ ತಿಳಿಸಿದರು.

 ಪ್ರಧಾನ ಕಾರ್ಯದರ್ಶಿ ಖಲೀಲ್, ನಿರ್ದೇಶಕರುಗಳಾದ ರಹೀಮ್, ಮೊಹಮ್ಮದ್, ವಾಸಿಂ, ಫಾಝಿಲ್, ಸಿಯಾದ್, ಉಮ್ಮರ್, ಪ್ರಭು, ಮುಸ್ತಫಾ ಮುಖ್ಯೋಪಾಧ್ಯಾಯರಾದ ಬಾಬು ನಾಯಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0