Kodagu

ಮಜ್ದೂರ್ ಸಂಘದ ಐಕ್ಯತೆ, ಸೇವಾ ಮನೋಭಾವ ಮಾದರಿ; ವಿಜು ಸುಬ್ರಮಣಿ | ಸಿದ್ದಾಪುರದಲ್ಲಿ 32ನೇ ವರ್ಷದ ಅದ್ದೂರಿ ಆಯುಧ ಪೂಜೆ ಆಚರಣೆ

admincoorgdaily

ವರದಿ -ಕೃಷ್ಣ ಸಿದ್ದಾಪುರ

 ಸಿದ್ದಾಪುರ:- ವಾಹನ ಚಾಲಕರ ಮಜ್ದೂರ್ ಸಂಘದ 32ನೇ ವರ್ಷದ ಆಯುಧ ಪೂಜೆ ಆಚರಣೆ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಯಾಗಿ ನಡೆಯಿತು. ಸಂಘದ ಜಿಲ್ಲಾಧ್ಯಕ್ಷ ಸೂದನ ಸತೀಶ್ ಧ್ವಜಾರೋಹಣ ನೆರವೇರಿಸಿದರು.

 ಸಂಘದ ನೇತೃತ್ವದಲ್ಲಿ ವಾಹನಗಳ ಸಾಮೂಹಿಕ ಪೂಜೆ ನಡೆಯಿತು. ಇದೇ ಸಂದರ್ಭದಲ್ಲಿ ನಡೆದ ಕ್ರೀಡಾಕೂಟಕೆ ಚಾಲನೆ ಠಾಣಾಧಿಕಾರಿ ಮಂಜುನಾಥ್ ನೀಡಿದರು ರಸ್ತೆ ಓಟ ಸ್ಪರ್ಧೆಯಲ್ಲಿ ಅಕ್ಷಯ್ ಪ್ರಥಮ ,ಅಜಯ್ ದ್ವಿತೀಯ,ಯಶ್ ತೃತೀಯ ಸ್ಥಾನ ಪಡೆದರೆ ನಿಧಾನ ಸೈಕಲ್ ಸ್ಪರ್ಧೆಯಲ್ಲಿ ದೈವಿಕ್ ಲಾಲ್ ಪ್ರಥಮ ಶಿವು ದ್ವಿತೀಯ ಸ್ಥಾನ ಪಡೆದರು, ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ವಿನಿತ ಪ್ರಥಮ,ರಾಜೇಶ್ವರಿ ದ್ವಿತೀಯ,ಹಾಗೂ ಸೂದನ ಗೀತ ಸತೀಶ್ ತೃತೀಯ ಸ್ಥಾನ ಪಡೆದರು ಮಡಿಕೆ ಒಡೆಯುವ ಸ್ಪರ್ಧೆ ಯಲ್ಲಿ ಸುಗುಣ ಪ್ರಥಮ ಸ್ಥಾನ ಪಡೆದರು.

 ಜಿಲ್ಲೆಯ ನಾಟ್ಯ ಶಾಲೆಗಳ ನಡುವೆ ಸಾಮುಹಿಕ ನೃತ್ಯ,ಭಾರತ ನಾಟ್ಯ,ಜಾನಪದ ನೃತ್ಯ ಸ್ಪರ್ಧೆ ನಡೆಯಿತು. ಸಾಮೂಹಿಕ ನೃತ್ಯ ವಿಭಾಗದಲ್ಲಿ ನೆಲ್ಯಾಹುದಿಕೇರಿಯ ರಿಫ್ಲೇಕ್ಸೆನ್ ಡೇಟ್ಸ್ ಸ್ಕೂಲ್ ಪ್ರಥಮ,ಟೀಂ ಪೇಸ್ ಡ್ಯಾನ್ಸ್ ಸ್ಕೂಲ್ ದ್ವಿತೀಯ ಸ್ಥಾನ ಪಡೆದರೆ ಸಿದ್ದಾಪುರದ ಭಾರತೀಯ ನಾಟ್ಯ ಶಾಲೆ ತೃತೀಯ ಸ್ಥಾನ ಪಡೆದುಕೊಂಡಿತು. ಭರತನಾಟ್ಯ ವಿಭಾಗದಲ್ಲಿ ಭಾರತೀಯ ನಾಟ್ಯ ಶಾಲೆ ಪ್ರಥಮ, ವಿರಾಜಪೇಟೆಯ ನಾಟ್ಯಾಂಜಲಿ ಡೇಟ್ಸ್ ಸ್ಕೂಲ್ ದ್ವೀತಿಯ ಸ್ಥಾನ ಪಡೆದರೆ ಜಗನ್ಮೋಹನ್ ನಾಟ್ಯ ಸ್ಕೂಲ್ ತೃತೀಯ ಸ್ಥಾನಗಳಿಸಿತು. ಜಾನಪದ ನೃತ್ಯ ವಿಭಾಗದಲ್ಲಿ ವಿರಾಜಪೇಟೆಯ ನಾಟ್ಯಾಂಜಲಿ ಡೇಟ್ಸ್ ಸ್ಕೂಲ್ ಪ್ರಥಮ, ನೆಲ್ಯಾಹುದಿಕೇರಿಯ ರಿಫ್ಲೇಕ್ಸೆನ್ ಡೇಟ್ಸ್ ಸ್ಕೂಲ್,ಟೀಂ ಪೇಸ್ ಡ್ಯಾನ್ಸ್ ಸ್ಕೂಲ್ ದ್ವಿತೀಯ , ತೃತೀಯ ಸ್ಥಾನಗಳಿಸಿದರು.

ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಸಾಮಾಜಿಕ ನ್ಯಾಯ ಸಮಿತಿ ಸದಸ್ಯ ವಿಜು ಸುಬ್ರಮಣಿ ಕರಕುಶಲ ಕರ್ಮಿಗಳು ಹಾಗೂ ಶ್ರಮಿಕ ವರ್ಗ ವರ್ಷಪೂರ್ತಿ ದುಡಿದು ಆಯುಧಗಳನ್ನು ಗೌರವಿಸಿ ಪೂಜಿಸುವ ಪೌರಾಣಿಕ ಹಿನ್ನೆಲೆ ಹೊಂದಿದೆ ಹಬ್ಬವಾದ ಆಯುಧ ಪೂಜೆಯನ್ನು ವಾಹನ ಚಾಲಕರ ಮಜ್ದೂರ್ ಸಂಘವು ಕಳೆದ 32 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವುದು ಸಂಘದಲ್ಲಿನ ಐಕ್ಯತೆ, ಸೇವಾ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ ನಿಜಕ್ಕೂ ಇವರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 ಇದೇ ಸಂದರ್ಭದಲ್ಲಿ ಮೈಸೂರು ದಸರಾ ಯೋಗ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ವಿಜೇತ ಕೆ.ಪಿ.ಸುಮೇಶ್ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನಾ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ ಹಾಗೂ ಅಂತರಾಷ್ಟ್ರೀ ಬಾಲಕಿಯರ ಫುಟ್ ಬಾಲ್ ತಂಡಕ್ಕೆ ಆಯ್ಕೆಯಾದ ದೀನಾ ಮೋಹನ್ ದೇವರನ್ನು ಗೌರವಿಸಿ ಸನ್ಮಾನಿಸಲಾಯಿತು. ನಂತರ ಕೋಯಿಕೋಡ್ ಸಾರಂಗ್ ಆರ್ಕ್ಟೇಷ್ಟ್ರಾ ಇವರಿಂದ ಸಂಗೀತ ರಸ ಮಂಜರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸುರೇಶ್ ,ಅನೀಶ್,ವಿನು ಕುಮಾರ್ಙ ,ಕೆ.ಎಂ. ಎಂ .ಹೆಚ್. ರತೀಶ್,ಪ್ರತೀಶ, ರಾಧಾಕೃಷ್ಣ ಅನಿಲ್ ಕುಮಾರ್ ಪಿ.ಕೆ. ರವಿ, ಹಾಜರಿದ್ದರು