ಅಪರಿಚಿತ ವ್ಯಕ್ತಿಗೆ ವಾಹನ ಡಿಕ್ಕಿ ಸ್ಥಳದಲ್ಲೇ ಸಾವು: ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲದಲ್ಲಿ ಘಟನೆ
ಪೊನ್ನಂಪೇಟೆ:ಶನಿವಾರ ರಾತ್ರಿ ವೇಳೆಯಲ್ಲಿ ಪೊನ್ನಂಪೇಟೆ ಶ್ರೀಮಂಗಲ ಮುಖ್ಯ ರಸ್ತೆಯ ತಾವಳಗೆರೆ ಗ್ರಾಮದ ಆಂಡಮಾಡಾ ಅರುಣ ರವರ ಮನೆ ಮುಂಭಾಗದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದ ಚಾರಿಗೆ ಯಾವುದೋ ವಾಹನ ಡಿಕ್ಕಿ ಪಡಿಸಿದ್ದು, ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿ,ಅಂದಾಜು 50 ವರ್ಷ, ಎತ್ತರ 5.2 ಅಡಿ,ಕಪ್ಪು ಬಿಳುಪು ತಲೆ ಕೂದಲು ಇದ್ದು, ಕುರುಚಲು ಗಡ್ಡ ಮೀಸೆ,ಕೋಲು ಮುಖ,ಹೆಣ್ಣಿಗೆಂಪು ಬಣ್ಣ,ಸಾಧಾರಣ ಮೈಕಟ್ಟು. ಎರಡು ಮೊಣಕಾಲಿನ ಬಿಳಿ ತೊನ್ನು ಮಚ್ಚೆ ಇರುತ್ತೆ. ಒಂದು ಆಕಾಶ ನೀಲಿ ಬಣ್ಣದ ತುಂಬುತೋಳಿನ ರೆಡಿಮೇಡ್ ಶರ್ಟು, ಕಾಫಿ ಬಣ್ಣದ ರೆಡಿಮೇಡ್ ಪ್ಯಾಂಟ್ ಧರಿಸಿರುತ್ತಾನೆ ತಲೆ ಹಿಂಬದಿಯಲ್ಲಿ ರಕ್ತಕಾಯವಾಗಿದ್ದು ಈ ಅಪರಿಚಿತ ವ್ಯಕ್ತಿಯ ಬಗ್ಗೆ ಹೆಸರು ವಿಳಾಸ ಸಂಬಂಧಿಕರಿಗೆ ಗೊತ್ತಾದಲ್ಲಿ ಕೂಡಲೇ ಶ್ರೀಮಂಗಲ ಪೊಲೀಸ್ ಠಾಣೆ ಎಚ್ಎಸ್ಓ ಅವರಿಗೆ ಮಾಹಿತಿ ನೀಡಲು ಕೋರಿದೆ. 08274246246 9480804960 +919742297638.