ಎಸ್‌ಎಸ್‌ಎಫ್ ನಾಪೋಕ್ಲು ಸೆಕ್ಟರ್ ನೂತನ ಅಧ್ಯಕ್ಷರಾಗಿ ಉವೈಸ್ ಸಖಾಫಿ ಆಯ್ಕೆ

Dec 25, 2025 - 10:58
 0  276
ಎಸ್‌ಎಸ್‌ಎಫ್ ನಾಪೋಕ್ಲು ಸೆಕ್ಟರ್ ನೂತನ ಅಧ್ಯಕ್ಷರಾಗಿ ಉವೈಸ್ ಸಖಾಫಿ ಆಯ್ಕೆ

ನಾಪೋಕ್ಲು: 2026ನೇ ಸಾಲಿನ ನಾಪೋಕ್ಲು ಸೆಕ್ಟರ್ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಾಪೋಕ್ಲುವಿನ ಫುಡ್ ಬೈಟ್ ರೆಸ್ಟೋರೆಂಟ್‌ನಲ್ಲಿ ನಡೆದ ಸೆಕ್ಟರ್ ಕೌನ್ಸಿಲ್ ಸಭೆ ನಡೆಯಿತು.

ಸೆಕ್ಟೆರ್ ನೂತನ ಅಧ್ಯಕ್ಷರಾಗಿ‌ಉವೈಸ್ ಸಖಾಫಿ ಚೆರಿಯಪರಂಬು, ಪ್ರಧಾನ ಕಾರ್ಯದರ್ಶಿಯಾಗಿ ಹ್ಯಾರಿಸ್ ನಾಪೋಕ್ಲು, ಫೈನಾನ್ಸ್ ಕಾರ್ಯದರ್ಶಿಯಾಗಿ ಬಿಲಾಲ್ ಕುಂಜಿಲ, ಉಪಾಧ್ಯಕ್ಷರಾಗಿ ಶಂಸೀರ್ ಹಾದಿ ಹೊಡವಾಡ, 8 ಕಾರ್ಯದರ್ಶಿಗಳು ಮತ್ತು 12 ಕಾರ್ಯಕಾರಿ ಸಮಿತಿ ಸದಸ್ಯರನ್ನು ನೂತನ ಸಮಿತಿಗೆ ಆಯ್ಕೆ ಮಾಡಲಾಯಿತು.

 ಮಡಿಕೇರಿ ಡಿವಿಷನ್ ಅಧ್ಯಕ್ಷರಾದ ರಾಶೀದ್ ಅಹ್ಸನಿ ಅವರು ನೂತನ ಸಮಿತಿಯನ್ನು ಘೋಷಿಸಿದರು. ಕಾರ್ಯಕ್ರಮದಲ್ಲಿ ನಜೀರ್ ಸಖಾಫಿ, ಅಸ್ಕರ್ ಸಖಾಫಿ, ಬಶೀರ್ ಹೊದವಾಡ, ಶಾಫಿ ಮಾಸ್ಟರ್ ಕುಂಜಿಲ, ಹ್ಯಾರಿಸ್ ಝುಹ್ರಿ, ಯುನೂಸ್ ನಾಪೋಕ್ಲು, ಖಾಲಿದ್ ಎರುಮಾಡ್ ಮತ್ತು ಎಸ್‌ವೈಎಸ್ (SYS) ಮತ್ತು ಎಸ್‌ಎಸ್‌ಎಫ್ (SSF) ಕೊಡಗು ಜಿಲ್ಲಾ ನಾಯಕರು ಹಾಗೂ ಡಿವಿಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0