ವಿ.ಬಾಡಗ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಚಂದೂರ ಕೀರ್ತನಾ ಪೊನ್ನಮ್ಮ ಅವರಿಂದ ಲ್ಯಾಪ್ ಟಾಪ್ ಕೊಡುಗೆ

Feb 11, 2026 - 19:01
 0  391
ವಿ.ಬಾಡಗ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಚಂದೂರ ಕೀರ್ತನಾ ಪೊನ್ನಮ್ಮ ಅವರಿಂದ ಲ್ಯಾಪ್ ಟಾಪ್ ಕೊಡುಗೆ

ವಿರಾಜಪೇಟೆ: ವಿರಾಜಪೇಟೆ ಸಮೀಪದ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ.ಬಾಡಗ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಚಂದೂರ ಕೀರ್ತನಾ ಪೊನ್ನಮ್ಮ ಅವರು ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರಿ ಆಗುವಂತೆ ರೂ 30,000 ಮೌಲ್ಯದ ಲ್ಯಾಪ್ ಟಾಪ್ ಅನ್ನು ಶಾಲೆಗೆ ಕೊಡುಗೆಯಾಗಿ ನೀಡಿರುತ್ತಾರೆ.

 ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಕೀರ್ತನಾ ಪೊನ್ನಮ್ಮ ಅವರು ವಿ ಬಾಡಗ ಗ್ರಾಮದ ಪ್ಲಾಂಟರ್ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿ ಬಾಡಗದ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಕೊಂಗಂಡ ಎಂ. ಕಾರ್ಯಪ್ಪ(ಕಾಶಿ) ಅವರ ಪುತ್ರಿ.

ವಿ ಬಾಡಗದ ಬಿಟ್ಟಂಗಾಲ ಗ್ರಾಮ ಪಂಚಾಯಿತಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಪ್ರಾಥಮಿಕ ಶಾಲೆ ಇದಾಗಿದ್ದು, ಗ್ರಾಮದ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಶಾಲೆಯ ಮೇಲಿನ ಅಭಿಮಾನ ಅಪಾರವಾಗಿದ್ದು ಈ ನಿಟ್ಟಿನಲ್ಲಿ ಪ್ರತಿ ವರ್ಷ ಕೊಡುಗೆಗಳು ಹರಿದು ಬರುತ್ತಿವೆ. ಶೇಕಡ ನೂರರಷ್ಟು ಬುಡಕಟ್ಟು ಜನಾಂಗದ ಎರವ ಮತ್ತು ಜೇನುಕುರುಬ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಾಲೆ ಇದಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0