ಕೊಡಗಿನ ಜೆ.ಕೆ ಮುತ್ತಮ್ಮ ರವರಿಗೆ ವಾಲ್ಮೀಕಿ ಪ್ರಶಸ್ತಿ ಪ್ರದಾನ
ಬೆಂಗಳೂರು: ವಿಧಾನಸೌದಲ್ಲಿ ಮುಖ್ಯಮಂತ್ರಿಗಳಿಂದ ಕೊಡಗಿನ ಜೆ.ಕೆ ಮುತ್ತಮ್ಮ ಅವರು ವಾಲ್ಮೀಕಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ರಾಜ್ಯ ಸರ್ಕಾರ ನೀಡಲಾಗುವ ವಾಲ್ಮೀಕಿ ಪ್ರಶಸ್ತಿಗೆ, ಈ ಬಾರಿ ಸಂಘಟನಾ ಕ್ಷೇತ್ರಕ್ಕೆ ಕೊಡಗಿನ ದಿಡ್ಡಳ್ಳಿ ಹೋರಾಟಗಾರ್ತಿ ಜೆ.ಕೆ ಮುತ್ತಮ್ಮ ರವರಿಗೆ ನೀಡಲಾಗಿದೆ. ಈ ಹಿಂದೆ ದಿಡ್ಡಳ್ಳಿ ಜನರ ಪುನರ್ವಸತಿ ಕೇಂದ್ರಕ್ಕಾಗಿ ತೀವ್ರ ಸ್ವರೂಪದ ಹೋರಾಟವನ್ನು ಮಾಡಿದ್ದರು.
ಅಂದಿನ ಸರ್ಕಾರ ಇವರ ನಡೆಗೆ ಮಣಿದು ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿ ಪುನರ್ವಸತಿ ಕೇಂದ್ರವನ್ನು ಆರಂಭಿಸಿ ನಿರಾಶ್ರಿತರಿಗೆ ಸಂಪೂರ್ಣ ಸವಲತ್ತು ಇರುವ ನಿವೇಶನ ಹಾಗೂ ಮನೆಯನ್ನು ನಿರ್ಮಿಸಿ ಕೊಟ್ಟಿದೆ. ಜಿ ಕೆ ಮುತ್ತಮ್ಮ ಹಲವಾರು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಮುದಾಯದವನ್ನ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ್ದಾರೆ. ಇವರ ಸಂಘಟನಾ ಚಾತುರ್ಯಕ್ಕಾಗಿ ವಾಲ್ಮೀಕಿ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ನೀಡಿದೆ.