ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ
ಮಡಿಕೇರಿ: ಮಡಿಕೇರಿ: ಮುಂದಿನ ನವೆಂಬರ್-ಡಿಸೆಂಬರ್‌ನಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರ ಹೆಸರನ್ನು ಅಧ್ಯಕ್ಷ ಅಭ್ಯರ್ಥಿಯಾಗಿ ನಾಡಿನ ಸಾಹಿತಿಗಳು ಅಂತಿಮಗೊಳಿಸಿದ್ದಾರೆ. ಪರಿಷತ್ತಿನ ಪ್ರತಿಷ್ಠೆ ಉಳಿಸಿ, ಸಾಹಿತಿಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾಹಿತಿ ಆರ್.ಜಿ.ಹಳ್ಳಿ ನಾಗರಾಜು ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತನ್ನು ಸದಸ್ಯರಿಗೆ ದೂರ ಮಾಡಿ ನಿರಂಕುಶ ಆಡಳಿತ ನಡೆಸಲಾಗುತ್ತಿದೆ. ಹಣಕಾಸು ದುರುಪಯೋಗದ ಆರೋಪಗಳು ಸಾಬೀತಾಗಿವೆ. ಆದ್ದರಿಂದ ದುರುಪಯೋಗವಾದ ಹಣ ವಸೂಲಿ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಪರಿಷತ್ತನ್ನು ಜನಾಭಿಮುಖವಾಗಿ ಬದಲಿಸಿ ಸಾಹಿತ್ಯ ಚಟುವಟಿಕೆ ಹೆಚ್ಚಿಸುವುದೇ ಗುರಿ. ನವೆಂಬರ್-ಡಿಸೆಂಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಸದಸ್ಯರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸಾಹಿತಿಗಳಾದ ಚಂದ್ರಶೇಖರ್, ನಂಜುಂಡೇಗೌಡ, ಪ್ರಮುಖರಾದ ಬೇಬಿ ಮ್ಯಾಥ್ಯೂ, ಟಿ.ಪಿ.ರಮೇಶ್ ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
