ರೈಲಿನಲ್ಲೇ ಮ್ಯಾಗಿ ಬೇಯಿಸಿದ ಮಹಿಳೆಯ ವಿಡಿಯೋ ವೈರಲ್
admincoorgdaily
ನವದೆಹಲಿ: ರೈಲು ಪ್ರಯಾಣದ ವೇಳೆ ಎಲೆಕ್ಟ್ರಿಕ್ ಕೆಟಲ್‌ನಲ್ಲಿ ಮ್ಯಾಗಿ ಬೇಯಿಸಿದ ಮಹಿಳೆಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಗಂಭೀರವಾಗಿ ಗಮನ ಹರಿಸಿದೆ.
Is this train travel hack to cook food in train is okay?
— Woke Eminent (@WokePandemic) November 20, 2025
Is this legal? pic.twitter.com/tuxj9qsoHv
ಪ್ರಯಾಣಿಕರ ಸೌಲಭ್ಯಕ್ಕಾಗಿ ಬೋಗಿಗಳಲ್ಲೇ ಟೀ, ಕಾಫಿ, ತಿಂಡಿ–ತಿನಿಸು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಿರುವುದರ ಜೊತೆಗೆ, ಮನೆಯಿಂದ ತಂದ ಆಹಾರ ಸೇವನೆಗೂ ಅವಕಾಶವಿದೆ. ಆದರೆ, ವಿದ್ಯುತ್ ಕೆಟಲ್‌ಗಳಂತಹ ಉಪಕರಣಗಳನ್ನು ಬಳಸುವುದಕ್ಕೆ ನಿಷೇಧವಿದೆ. ಇದನ್ನು ಲೆಕ್ಕಿಸದೆ ಮಹಿಳೆಯೊಬ್ಬರು ಕೆಟಲ್ ಬಳಸಿ ಮ್ಯಾಗಿ ತಯಾರಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ವಿಡಿಯೋ ಹರಿದಾಡುತ್ತಿದ್ದಂತೆಯೇ ಕೇಂದ್ರ ರೈಲ್ವೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, “ರೈಲಿನೊಳಗೆ ಕೆಟಲ್ ಬಳಕೆ ನಿಷೇಧಿಸಿದೆ. ಸಂಬಂಧಪಟ್ಟ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದೆ.
“ಇಂತಹ ವರ್ತನೆ ಅಸುರಕ್ಷಿತ ಮತ್ತು ಕಾನೂನುಬಾಹಿರ. ಬೆಂಕಿ ಅಪಾಯ, ಶಾರ್ಟ್ ಸರ್ಕ್ಯೂಟ್ ಮತ್ತು ಇತರ ಪ್ರಯಾಣಿಕರಿಗೂ ಅಪಾಯ ಉಂಟಾಗುವ ಸಾಧ್ಯತೆ ಇದೆ” ಎಂದು ಎಚ್ಚರಿಕೆ ನೀಡಲಾಗಿದೆ.
“ಜಾಗರೂಕತೆಯಿಂದ ಪ್ರಯಾಣಿಸಿ, ಸುರಕ್ಷತಾ ನಿಯಮ ಪಾಲಿಸಿ. ಹೈ–ವೋಲ್ಟೇಜ್ ಸಾಧನಗಳ ಬಳಕೆ ತಪ್ಪಿಸಿ” ಎಂದು ರೈಲ್ವೆ ಮನವಿ ಮಾಡಿದೆ.