ಗ್ರಾಮ ಸಹಾಯಕರ ಮುಷ್ಕರ; ನಾಪೋಕ್ಲು ಕಂದಾಯ ಪರಿವೀಕ್ಷಕರಿಗೆ ಮನವಿ ಸಲ್ಲಿಕೆ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆ.24ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವಂತೆ ನಾಪೋಕ್ಲು ಕಂದಾಯ ಇಲಾಖೆಯ ಗ್ರಾಮ ಸಹಾಯಕರು ಮನವಿ ಸಲ್ಲಿಸಿದರು.
ಕಂದಾಯ ಇಲಾಖೆಯ ನಾಪೋಕ್ಲು ಹೋಬಳಿ ಕಚೇರಿಯಲ್ಲಿ ಕಂದಾಯ ಪರಿವೀಕ್ಷಕ ರವಿಕುಮಾರ್ ಅವರಿಗೆ ಬೆಂಗಳೂರಿನಲ್ಲಿ ನಡೆಯುವ ಮುಷ್ಕರದಲ್ಲಿ ಕೇಂದ್ರ ಸ್ಥಾನದಿಂದ ತೆರಳಲು ಅನುಮತಿ ನೀಡುವಂತೆ ಕೋರಿ ನಾಪೋಕ್ಲು ಕಂದಾಯ ಇಲಾಖೆಯ ಗ್ರಾಮ ಸಹಾಯಕರು ಮನವಿ ಸಲ್ಲಿಸಿದರು. ಈ ಸಂದರ್ಭ ಗ್ರಾಮ ಸಹಾಯಕರಾದ ತಿಮ್ಮಣ್ಣ,ಪೂಣಚ್ಚ,ಪ್ರಸಾದ್,ಸೋಮಯ್ಯ,ದೇಚಮ್ಮ,ರಾಜ,ಲಾ ಲು,ಕುಶಾಲಪ್ಪ,ಸಂಜಯ್ ಹಾಜರಿದ್ದರು.