ಹೊಸ ವರ್ಷದ ಪ್ರಯುಕ್ತ ಕಕ್ಕಬ್ಬೆ ನಾಲಡಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಗ್ರಾಮಸ್ಥರಿಂದ ಟ್ರ್ಯಾಕ್ ಶೂಟ್ ವಿತರಣೆ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳಿಗೆ ನಾಲಡಿಯ ಗ್ರಾಮಸ್ಥರು ಹೊಸ ವರ್ಷದ ಪ್ರಯುಕ್ತ ಟ್ರ್ಯಾಕ್ ಸೂಟ್ ಅನ್ನು ಕೊಡುಗೆಯಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.
ಗ್ರಾಮಸ್ಥರು ಉದಾರವಾಗಿ ನೀಡಿದ ಟ್ರ್ಯಾಕ್ ಸೂಟನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ವಿತರಿಸಿದರು. ಗ್ರಾಮಸ್ಥರ ಉದಾರ ಸೇವೆಗೆ ಶಾಲೆಯ ಶಿಕ್ಷಕ ವೃಂದ, ಮೇಲುಸ್ತುವಾರಿ ಸಮಿತಿಯವರು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಸಂದರ್ಭ ಶಾಲೆಯ ಅತಿಥಿ ಶಿಕ್ಷಕರಾದ ಗೌರಮ್ಮ, ಶಾರಿಕ, ಸಿಬ್ಬಂದಿ ವೀಣಾ ಉಪಸ್ಥಿತರಿದ್ದರು.