ಚೆಂಬೆಬೆಳ್ಳೂರುವಿನಲ್ಲಿ ಒಂಟಿ ಸಲಗ ಸೆರೆ;ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Mar 23, 2026 - 08:44
 0  607
ಚೆಂಬೆಬೆಳ್ಳೂರುವಿನಲ್ಲಿ ಒಂಟಿ ಸಲಗ ಸೆರೆ;ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಸಿದ್ದಾಪುರ:- ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಸುತ್ತಮುತ್ತಲ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬಿಡು ಬಿಟ್ಟು ಅಪಾರ ಪ್ರಮಾಣದ ಕೃಷಿ ಪಸಲು ನಾಶ ಮಾಡುವುದರ ಮೂಲಕ ಕಾರ್ಮಿಕರು, ಬೆಳೆಗಾರರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದ ಪುಂಡನೆಯನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ದುಬಾರೆ ಹಾಗೂ ಮತ್ತಿಗೋಡು ಶಿಬಿರದ ಸಾಕಾನೆಗಳಾದ ಅಭಿಮನ್ಯು ಮಹೇಂದ್ರ, ಕಂಜನ್, ಭೀಮಾ, ಸುಗ್ರೀವ, ಹರ್ಷ ಆನೆಗಳೊಂದಿಗೆ ಕಾರ್ಯಚರಣೆಗಳಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಸತತ ಐದು ಗಂಟೆ ಕಾಲ ಆನೆ ಇರುವಿಕೆಯ ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿ ಕೊನೆಗೆ ಚೆಂಬೆಬೆಳ್ಳೂರು ಕಾಫಿ ತೋಟದೊಂದರ ಸಮೀಪ ಕಂಡು ಬಂದಿದೆ.ವನ್ಯಜೀವಿ ವೈದ್ಯಾಧಿಕಾರಿ ಡಾ ರಮೇಶ್, ಕುಶಾಲನಗರ ಉಪ ಅರಣ್ಯ ಅಧಿಕಾರಿ ಶಾರ್ಪ್ ಶೂಟರ್ ಕನ್ನಂಡ ರಂಜನ್ ಬಂದುಕಿನ ಮೂಲಕ ಅರವಳಿಕೆ ನಿಡುವಲ್ಲಿ ಯಶಸ್ವಿಯಾಗಿದ್ದಾರೆ.

ನಂತರ ಸಾಕಾನೆಗಳ ಸಹಕಾರದಿಂದ ಆರೈಕೆ ಮಾಡಿ ನಂತರ ಮತ್ತಿಗೂಡು ಶಿಬಿರಕ್ಕೆ ಕಳಿಸಲಾಯಿತು. ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ, ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಅವರ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಿ ಕಾಡಾನೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ವರ್ಷಗಳಿಂದ ನಿರಂತರವಾಗಿ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಹಡಗಲಿನಲ್ಲೂ ಕಾಣಿಸಿಕೊಳ್ಳುವುದರ ಮೂಲಕ ಹಲವರ ಮೇಲೆ ದಾಳಿಗೆ ಯತ್ನಿಸಿತ್ತು.

ಬೆಳೆಗಾರರು, ಕಾರ್ಮಿಕರು ತೋಟಕೆ ತೆರಳಲು ಹಿಂದೇಟು ಆಕೂತ್ತಿದ್ದರು ಚೆಂಬೆಬೆಳ್ಳೂರು, ದೇವಣಗೇರಿ, ಬೆಳ್ಳರಿಮಾಡು, ಕುಕ್ಲೂರು, ಪೊದಕೋಟೆ, ಐಮಂಗಲ, ಮೈತಾಡಿ, ಕದನೂರು, ಬಿಳುಗುಂದ, ಹಾಲುಗುಂದ ಹಾಗೂ ಅಮ್ಮತಿ ಸುತ್ತಮುತ್ತಲ ಗ್ರಾಮಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದು ಕಾಡಾನೆ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಕ್ಷೇತ್ರದ ಶಾಸಕ ಎ ಎಸ್ ಪೊನ್ನಣ್ಣ ಕಾಡಾನೆ ಸೆರೆ ಹಿಡಿಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಕಾಡಾನೆ ಸೆರೆಯಿಂದ ಗ್ರಾಮಸ್ಥರು ನೆಚ್ಚಿಸಿರು ಬಿಟ್ಟಿದ್ದು ಇತರ ಕಾಡಾನೆಗಳನ್ನು ಕಾಡಿಗಟ್ಟಬೇಕೆಂದು ಒತ್ತಾಯಿಸಿದ್ದಾರೆ. , ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾತನಾಡಿ ಮೇಲಾಧಿಕಾರಿಗಳ ಅನುಮತಿಯೊಂದಿಗೆ ಕಾಡಾನೆಯನ್ನ ಸೆರೆ ಹಿಡಿಯಲಾಗಿದ್ದು ಮತ್ತಿಗೂಡು ಶಿಬಿರಕ್ಕೆ ಸ್ಥಳಾಂತರಿಸಲಾಗುತ್ತಿದೆ ನೂರಕ್ಕೆ ಹೆಚ್ಚು ಸಿಬ್ಬಂದಿಗಳು ಭಾಗವಹಿಸಿದ್ದು ಸತತ ಕಾರ್ಯಚರಣೆ ಮೂಲಕ ಆನೆ ಸೆರೆ ಹಿಡಿಯಲಾಗಿದೆ ಎಂದರು.

ಈ ಸಂದರ್ಭ ಮಡಿಕೇರಿ ಡಿ ಸಿ ಎಫ್ ರಮೇಶ್, ಎಸಿಎಫ್ ಗೋಪಾಲ್, ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್, ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಡಾ ಚೆಟ್ಟಿಯಪ್ಪ, ಡಿ ಆರ್ ಎಫ್ ಓ ಸಂಜಿತ್ ಸೋಮಯ್ಯ, ರಾಘವ, ದಿವಾಕರ್, ಶಶಿ, ಮೂರ್ತಿ, ಜಡಿಮಣಿ ಸೇರಿದಂತೆ ಆರ್ ಆರ್ ಟಿ ,ಇ ಪಿ ಟಿ, ಅರಣ್ಯ ಇಲಾಖೆಯ ಸಿಬ್ಬಂದಿ ಸೇರಿ ನೂರಕ್ಕೂ ಅಧಿಕ ಮಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0