ವಿರಾಜಪೇಟೆ: ಅನ್ವಾರುಲ್ ಹುದಾ ಪಬ್ಲಿಕ್ ಶಾಲೆಯಲ್ಲಿ ಪೋಷಕರ ಸಭೆ

ವಿರಾಜಪೇಟೆ: ಅನ್ವಾರುಲ್ ಹುದಾ ಪಬ್ಲಿಕ್ ಶಾಲೆಯಲ್ಲಿ ಪೋಷಕರ ಸಭೆ

ವಿರಾಜಪೇಟೆ: ಅನ್ವಾರುಲ್ ಹುದಾ ಪಬ್ಲಿಕ್ ಶಾಲೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಸಭೆ ಶನಿವಾರ ನಡೆಯಿತು. ಅನ್ವಾರುಲ್ ಹುದಾ ಸೆಂಟರ್‌ನ ಬೋರ್ಡ್ ಸದಸ್ಯ ಯಾಕೂಬ್ ರಿಜ್ವಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾರ್ಥನೆಯನ್ನು ಅನ್ವಾರುಲ್ ಹುದಾ ಶಾಲೆಯ ಧಾರ್ಮಿಕ ಶಿಕ್ಷಕರಾದ ಅಹ್ಮದ್ ಮದನಿ ನೆರವೇರಿಸಿದರು.

ಶಾಲೆಯ ಶಿಕ್ಷಕಿ ಸಫ್ವಾನ ಅವರು ಸ್ವಾಗತಿಸಿದರು. ಶಾಲೆಯ ಪ್ರಾಂಶುಪಾಲರಾದ ಹಸ್ಸೈನರ್, ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಸಮೃದ್ಧ ಅನುಭವ ಹೊಂದಿದ್ದು, ಮಕ್ಕಳ ಸಂಪೂರ್ಣ ಬೆಳವಣಿಗೆಗೆ ತ್ಯಾಗಭಾವದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸಭೆಯಲ್ಲಿ ಅವರು ಪೋಷಕರ ಸಹಭಾಗಿತ್ವವು ಮಕ್ಕಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಎಷ್ಟು ಮಹತ್ವದ್ದೆಂದು ವಿವರಿಸಿದರು. ವಿಶೇಷವಾಗಿ, ಶಾಲೆಯ ಶಿಸ್ತು ಕಾಪಾಡಿಕೊಳ್ಳುವುದು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಎಷ್ಟು ಅವಶ್ಯಕವೋ ಅದನ್ನು ಒತ್ತಿ ಹೇಳಿದರು. ಸಮಯ ಪಾಲನೆ, ಉಡುಗೆ ನಿಯಮ, ನೈತಿಕ ಮೌಲ್ಯಗಳು ಹಾಗೂ ಪರಸ್ಪರ ಗೌರವ ಇವುಗಳನ್ನೆಲ್ಲ ಪಾಲಿಸುವಂತೆ ಪೋಷಕರಿಗೆ ವಿನಂತಿಸಿದರು. ವಿದ್ಯಾರ್ಥಿಗಳ ಹಾಜರಾತಿ, ಪರೀಕ್ಷಾ ಸಿದ್ಧತೆ ಹಾಗೂ ಮನೆಯಲ್ಲಿಯೇ ಓದಿಗೆ ಪ್ರೋತ್ಸಾಹ ನೀಡುವ ಬಗ್ಗೆ ಮಾರ್ಗದರ್ಶನ ನೀಡಿದರು. ವೇದಿಕೆಯಲ್ಲಿ ಶಾಲೆಯ ಆಡಳಿತಾಧಿಕಾರಿಗಳಾದ ಇಲ್ಯಾಸ್ ಅನ್ವಾರಿ ಅವರು ಉಪಸ್ಥಿತರಿದ್ದರು.