ವಿರಾಜಪೇಟೆ: ಬ್ಯಾಕ್ ಹೋಲ್ ಲೋಡರ್ ಯಂತ್ರಕ್ಕೆ ಚಾಲನೆ ನೀಡಿದ ಎ‌.ಎಸ್ ಪೊನ್ನಣ್ಣ

ವಿರಾಜಪೇಟೆ: ಬ್ಯಾಕ್ ಹೋಲ್ ಲೋಡರ್ ಯಂತ್ರಕ್ಕೆ ಚಾಲನೆ ನೀಡಿದ ಎ‌.ಎಸ್ ಪೊನ್ನಣ್ಣ

ವಿರಾಜಪೇಟೆಯ:ಪುರಸಭೆ ಕಚೇರಿ ಆವರಣದಲ್ಲಿ, ಪುರಸಭೆ ಕಾಮಗಾರಿಗಳಿಗೆ ನೂತನವಾಗಿ ಖರೀದಿಸಿದ ಬ್ಯಾಕ್ ಹೋಲ್ ಲೋಡರ್ ಯಂತ್ರಕ್ಕೆ ಚಾಲನೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರು ನೀಡಿದರು. ಬಳಿಕ ಮಾತನಾಡಿದ ಶಾಸಕರು, ತೀವ್ರ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ವಿರಾಜಪೇಟೆ ಪುರಸಭೆಗೆ ಈ ಯಂತ್ರದ ಅವಶ್ಯಕತೆ ಇದ್ದು, ಇದರ ಸೇರ್ಪಡೆಯೊಂದಿಗೆ ಪುರಸಭೆಯ ಕಾಮಗಾರಿಗಳು ಮತ್ತಷ್ಟು ವೇಗ ಪಡೆಯಲು ಸಹಕಾರಿಯಾಗಲಿದೆ. ಇದರ ಸದುಪಯೋಗವನ್ನು ಪುರಸಭೆಯ ಅಧಿಕಾರಿಗಳು ಉಪಯೋಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದ ಶಾಸಕರು, ಜನಸಾಮಾನ್ಯರಿಗೆ ಅನುಕೂಲ ಆಗುವಂತೆ ಕಾರ್ಯನಿರ್ವಹಿಸಬೇಕೆಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಶ್ರೀಮತಿ ದೇಚಮ್ಮ ಕಾಳಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಉಪಾಧ್ಯಕ್ಷೆ ಶ್ರೀಮತಿ ಫಜಿಯ ತಬಸಂ, ಮುಖ್ಯ ಅಧಿಕಾರಿ ನಾಚಪ್ಪ,ಪುರಸಭೆ ಸದಸ್ಯರುಗಳು, ನಾಮನಿರ್ದೇಶಿತ ಸದಸ್ಯರು,ಸಿಬ್ಬಂದಿ ವರ್ಗದವರು, ಪುರಸಭೆ ಕಾರ್ಮಿಕರು ಮತ್ತು ಪ್ರಮುಖರು ಉಪಸ್ಥಿತರಿದ್ದರು.