ವಿರಾಜಪೇಟೆ; ಶ್ರೀ ದುರ್ಗಿ ವಿಷ್ಣು ಮೂರ್ತಿ ನಾಗ ದೇವಸ್ಥಾನದಲ್ಲಿ ಶ್ರೀ ದುರ್ಗಿ ವಿಷ್ಣುಮೂರ್ತಿ ನಾಗದೇವರ ಪ್ರತಿಷ್ಠಾ ವರ್ಧಂತಿ 5 ನೇ ವಾರ್ಷಿಕೋತ್ಸವ

Apr 11, 2026 - 06:33
 0  217
ವಿರಾಜಪೇಟೆ; ಶ್ರೀ ದುರ್ಗಿ ವಿಷ್ಣು ಮೂರ್ತಿ ನಾಗ ದೇವಸ್ಥಾನದಲ್ಲಿ ಶ್ರೀ ದುರ್ಗಿ ವಿಷ್ಣುಮೂರ್ತಿ ನಾಗದೇವರ ಪ್ರತಿಷ್ಠಾ ವರ್ಧಂತಿ 5 ನೇ ವಾರ್ಷಿಕೋತ್ಸವ

ವಿರಾಜಪೇಟೆ: ನಗರದ ಶಿವಕೇರಿಯಲ್ಲಿರುವ ಶ್ರೀ ದುರ್ಗಿ ವಿಷ್ಣು ಮೂರ್ತಿ ನಾಗ ದೇವಸ್ಥಾನದಲ್ಲಿ ಶ್ರೀ ದುರ್ಗಿ ವಿಷ್ಣುಮೂರ್ತಿ ನಾಗದೇವರ ಪ್ರತಿಷ್ಠಾ ವರ್ಧಂತಿ 5 ನೇ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ಪ್ರಧಾನ ಕಳಶ ಪೂಜೆ, ವಿಷ್ಣು ಸಹಸ್ರನಾಮ, ತುಳಸಿ ಅರ್ಚನೆ, ಕಳಶ ಅಭಿಷೇಕ, ಬೆಳ್ಳಿಯ ಕವಚ ಸಮರ್ಪಣೆ ನಡೆಯಿತು. ಬಳಿಕ ಬೆಳಿಗ್ಗೆ 10 ಗಂಟೆಯಿಂದ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.

ಮದ್ಯಾಹ್ನ ದೇವರ ಅಲಂಕಾರ ಪೂಜೆ ನಡೆದ ಬಳಿಕ, ದೇವರ ನೃತ್ಯ ಬಲಿ ಪ್ರದರ್ಶನ, ಶ್ರೀದುರ್ಗಿ ವಿಷ್ಣು ಮೂರ್ತಿ ನಾಗದೇವರಿಗೆ ಮಹಾಪೂಜೆ ಪ್ರಸಾಧ ವಿನಿಯೋಗ ನಂತರ ಅನ್ನ ಸಂತರ್ಪಣೆ ನಡೆಯಿತು. ವಿರಾಜಪೇಟೆ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಿಂದಲೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0