ವಿರಾಜಪೇಟೆ; ಪುರಸಭೆಯಲ್ಲಿ 80ನೇ ಸ್ವಾತಂತ್ರ್ಯ ದಿನ ಆಚರಣೆ

Aug 15, 2026 - 11:15
 0  38
ವಿರಾಜಪೇಟೆ; ಪುರಸಭೆಯಲ್ಲಿ 80ನೇ ಸ್ವಾತಂತ್ರ್ಯ ದಿನ ಆಚರಣೆ

ವಿರಾಜಪೇಟೆ:ವಿರಾಜಪೇಟೆಯ ಪುರಸಭೆಯಲ್ಲಿ 80ನೇ ಸ್ವಾತಂತ್ರ್ಯ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. 80 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ ದ್ವಜಾರೋಹಣ ಮಾಡಿದರು.

  ಬಳಿಕ ಸ್ವಾತಂತ್ರೋತ್ಸವದ ಸಂದೇಶ ನೀಡಿದ ಮುಖ್ಯಾಧಿಕಾರಿ ನಾಚಪ್ಪ ಅವರು ಸ್ವತಂತ್ರ ಸಂಗ್ರಾಮದ ಕೆಲವು ಮಾಹಿತಿ ಹಂಚಿಕೊಂಡು ಮಾತನಾಡಿ, ನಾವು ಇಷ್ಟು ನೆಮ್ಮದಿಯಿಂದ ಇರಲು ಮುಖ್ಯ ಕಾರಣ ನಮ್ಮ ಯೋಧರು, ಅವರನ್ನು ಈ ಸಂದರ್ಭದಲ್ಲಿ ಸ್ಮರಣೆ ಮಾಡಬೇಕು. ಪ್ರತಿದಿನವೂ ಸ್ವತಂತ್ರ ದಿನದಂತೆ ನಾವು ಆಚರಣೆ ಮಾಡಬೇಕು, ಆ ಸಮಯದಲ್ಲಿ ವೀರ ಮರಣ ಹೊಂದಿದ ಯೋಧರನ್ನು ಸ್ಮರಿಸಿದರು. 

   ಈ ಸಂದರ್ಭದಲ್ಲಿ ಪುರಸಭೆಯ ಆರೋಗ್ಯ ಅಧಿಕಾರಿ ಕೋಮಲ, ಕಂದಾಯ ಅಧಿಕಾರಿ ಸೋಮೇಶ್, ವ್ಯವಸ್ತಾಪಕರಾದ ಸುಜಾತ, ಪರಿಸರ ಅಭಿಯಂತರರಾದ ರೀತು ಸಿಂಗ್ ಸೇರಿದಂತೆ ಕಚೇರಿ ಸಿಬ್ಬಂದಿಗಳು, ಪೌರ ಕಾರ್ಮಿಕರು ಹಾಜರಿದ್ದರು.

 ನಂತರ ಮುಖ್ಯ ರಸ್ತೆಯಲ್ಲಿ ಸಾಗಿಬಂದ ಮೆರವಣಿಗೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಸಿಹಿ ಹಂಚಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0