ವಿರಾಜಪೇಟೆ:ಕೋಟೆಕೊಪ್ಪ ಗ್ರಾಮದ ಶ್ರೀ ಬೈತೂರೇಶ್ವರ ದೇವಾಲಯದ ಬನದಲ್ಲಿ ವಾರ್ಷಿಕ ಹಬ್ಬ
ವಿರಾಜಪೇಟೆ:ವಿರಾಜಪೇಟೆ ಸಮೀಪದ ಕೋಟೆಕೊಪ್ಪ ಗ್ರಾಮದ ಶ್ರೀ ಬೈತೂರೇಶ್ವರ ದೇವಾಲಯದ ಬನದಲ್ಲಿ ವಾರ್ಷಿಕ ಹಬ್ಬವು ವಿಜೃಂಭಣೆಯಿಂದ ಜರುಗಿತು. ವಿವಿಧ ಪೂಜೆ ವಿಧಾನಗಳೊಂದಿಗೆ ಬನದ ಬೈತೂರೇಶ್ವರ ದೇವರಿಗೆ ಮಹಾಪೂಜೆ ಹಾಗೂ ಇನ್ನಿತರ ಪೂಜೆಗಳು ನೆರವೇರಿದವು. ಬಳಿಕ ನೆರೆದ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು, ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
