ವಿರಾಜಪೇಟೆ:ಕೊಡಗು ಮಹಿಳಾ ಸಹಕಾರ ಸಂಘದಲ್ಲಿ ಹೈಟೆಕ್ ಶೌಚಾಲಯದ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

Feb 10, 2026 - 09:23
 0  254
ವಿರಾಜಪೇಟೆ:ಕೊಡಗು ಮಹಿಳಾ ಸಹಕಾರ ಸಂಘದಲ್ಲಿ ಹೈಟೆಕ್ ಶೌಚಾಲಯದ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ವಿರಾಜಪೇಟೆ:ವಿರಾಜಪೇಟೆಯ ನಂ.371 ನೇ ಕೊಡಗು ಮಹಿಳಾ ಸಹಕಾರ ಸಂಘ (ಮಹಿಳಾ ಸಮಾಜ)ದಲ್ಲಿ ರೂ.25 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಹೈಟೆಕ್ ಶೌಚಾಲಯದ ನಿರ್ಮಾಣ ಕಾಮಗಾರಿಗೆ ಸಮಾಜದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ ಹಾಗೂ ವಿರಾಜಪೇಟೆ ಪುರಸಭೆ ಗಾಂಧಿನಗರ ವಾರ್ಡ್‍ನ ಮಾಜಿ ಸದಸ್ಯೆ ಸುನಿತ ಅವರು ಭೂಮಿ ಪೂಜೆ ನೆರವೇರಿಸಿದರು.

    ಈ ಸಂದರ್ಭ ಮಾತನಾಡಿದ ಅಧ್ಯಕ್ಷರಾದ ಗೀತಾ ಬೆಳ್ಯಪ್ಪ ವಿರಾಜಪೇಟೆಯ ಮಹಿಳಾ ಸಮಾಜದಲ್ಲಿ ಇದ್ದ ಶೌಚಾಲಯ ದುಸ್ಥಿತಿಯಲ್ಲಿದ್ದು ಸಭೆ ಸಮಾರಂಭಗಳು ಇದ್ದ ಸಂದರ್ಭ ಸಾರ್ವಜನಿಕರಿಗೆ ಬಳಸಲು ಯೋಗ್ಯವಲ್ಲದ ರೀತಿಯಲ್ಲಿತ್ತು. ಆದ್ದರಿಂದ ಸರ್ವ ಸದಸ್ಯರ ಒಪ್ಪಿಗೆಯಂತೆ ನೂತನ ಶೌಚಾಲಯ ನಿರ್ಮಾಣ ಮಾಡಲು ತೀರ್ಮಾನಿಸಿ ಇದೀಗ ಭೂಮಿ ಪೂಜೆ ನಡೆಸಲಾಗಿದೆ. ಅಲ್ಲದೆ ಇದರ ಕಾಮಗಾರಿ ನಡೆಸಲು ಅನುದಾನದ ಕೊರತೆ ಇದ್ದು ದಾನಿಗಳ ನೆರವಿನಿಂದ ಕಾಮಗಾರಿ ನಡೆಸಬೇಕಿದೆ. ಸಾರ್ವಜನಿಕರ, ದಾನಿಗಳ ಸಹಕಾರವು ನಮಗೆ ಬೇಕಿದೆ ಎಂದರು.

 ಈ ಸಂದರ್ಭ ಮಹಿಳಾ ಸಹಕಾರ ಸಂಘದ ಉಪಾಧ್ಯಕ್ಷೆ ಬಿ.ಆರ್. ಸಬಿತ, ನಿರ್ದೆಶಕರಾದ ಆಶಾ ಚಿಣ್ಣಪ್ಪ, ಯು.ಕೆ. ಪೊನ್ನಮ್ಮ, ಕುಸುಮ ಸೋಮಣ್ಣ, ಜಯಲೀಲಾ ಸತೀಶ್, ಪಿ.ಕೆ. ನೀಲಮ್ಮ, ಪ್ರೇಮ ಮಂಜುನಾಥ್, ಬಿ.ಎನ್. ಭಾರತಿ, ಬಿ.ಯಶೋಧ, ಹೆಚ್.ಆರ್. ಪುಷ್ಪ ವಾಸು, ಪುಷ್ಪ ಐತಪ್ಪ, ಮೆಟಿಲ್ಡಾ ಲೋಬೋ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಜಿ. ಪುಷ್ಪಲತಾ ಸೇರಿದಂತೆ ಸದಸ್ಯರುಗಳು, ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0