ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆ

ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆ

ವಿರಾಜಪೇಟೆ: ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆಯು ನೂತನ ಅಧ್ಯಕ್ಷರಾದ ಮತೀನ್ ಎಸ್ ಹೆಚ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪ್ರಚಾರ ಸಮಿತಿಯ ಕಾರ್ಯವೈಖಾರಿಗಳ ಬಗ್ಗೆ ಚರ್ಚಿಸಲಾಯಿತು ಹಾಗೆ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಅಧ್ಯಕ್ಷರು ಮಾತನಾಡಿ ನಮ್ಮ ಶಾಸಕರು ಮತ್ತು ಪಕ್ಷ ಜನಸಾಮಾನ್ಯರಿಗೋಸ್ಕರ ಮಾಡುತ್ತಿರುವ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದೆ ಸತ್ಯಾಂಶವನ್ನು ತರುವ ಕಾರ್ಯವನ್ನು ಮಾಡೋಣ. ನಮ್ಮ ಶಾಸಕರಿಗೆ ಹಗಲು ರಾತ್ರಿ ಅನ್ನದೆ ಅವರ ಜೊತೆ ನಿಲ್ಲೋಣ ಎಂಬ ಕಿವಿ ಮಾತನ್ನು ಹೇಳಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಪ್ರಚಾರ ಸಮಿತಿಯ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.