ವಿರಾಜಪೇಟೆ: ವ್ಯಕ್ತಿಯ ಶವ ಪತ್ತೆ

Jan 4, 2026 - 16:37
 0  1.4k
ವಿರಾಜಪೇಟೆ: ವ್ಯಕ್ತಿಯ ಶವ ಪತ್ತೆ

ವಿರಾಜಪೇಟೆ: ಅಪರಿಚಿತ ವ್ಯಕ್ತಿಯೋರ್ವರ ಶವ ಬಿಟ್ಟಂಗಾಲ, ನಾಂಗಾಲ ಜಂಕ್ಷನ್‌ ನಿಂದ ವಿರಾಜಪೇಟೆ ತೆರಳುವ ರಸ್ತೆಯ ಬದಿಯಲ್ಲಿ ಪತ್ತೆಯಾಗಿದೆ.

 ಸುಮಾರು 60-65 ವರ್ಷ ಪ್ರಾಯ ಹೊಂದಿರುವ ಪುರುಷನ ಮೃತ ದೇಹ ಪತ್ತೆಯಾಗಿದ್ದು ಜೆ.ಕೆ.ರಾಜು ಎಂದು ಗುರುತಿಸಲಾಗಿದ್ದು. ವಿರಾಜಪೇಟೆ ಯಿಂದ ಬಿಟ್ಟಂಗಾಲ ತೆರಳುತಿದ್ದ ವಾಹನ ಚಾಲಕರೋರ್ವರು ತಾ. 02-01-2026 ರಂದು ಸಂಜೆ ಮನೆಗೆ ತೆರಳುತಿದ್ದ ಸಂಧರ್ಭದಲ್ಲಿ ರಸ್ತೆಯ ಬದಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಗುರುತು ಪತ್ತೆಗಾಗಿ ವಾರಸುದಾರರಿಂದ ಪೊಲೀಸ್ ಇಲಾಖೆಯು ಮನವಿ ಮಾಡಿದೆ. ಮೃತರ ಮಾಹಿತಿ ತಿಳಿದುಬಂದಲ್ಲಿ,ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ,9480804933,9480804956,ಪೊಲೀಸ್ ಕಂಟ್ರೋಲ್ ರೂಂ 08272-228330 ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

What's Your Reaction?

Like Like 0
Dislike Dislike 1
Love Love 2
Funny Funny 1
Angry Angry 1
Sad Sad 4
Wow Wow 0