ವಿರಾಜಪೇಟೆ: ಅಪರಿಚಿತ ವ್ಯಕ್ತಿಯ ಶವ ಪತ್ತೆ

Dec 4, 2025 - 20:35
 0  1.4k
ವಿರಾಜಪೇಟೆ: ಅಪರಿಚಿತ ವ್ಯಕ್ತಿಯ ಶವ ಪತ್ತೆ

ವಿರಾಜಪೇಟೆ: ಗ್ರಂಥಾಲಯದ ಆವರಣದಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ಪತ್ತೆಯಾಗಿರುವ ಘಟನೆ ವಿರಾಜಪೇಟೆ ಹೊರವಲಯ ಬಿಟ್ಟಂಗಾಲದಲ್ಲಿ ನಡೆದಿದೆ. ವಿರಾಜಪೇಟೆ ಹೊರವಲಯ ಬಿಟ್ಟಂಗಾಲ ಗ್ರಾಮ ಪಂಚಾಯಿತಿಗೆ ಹೊಂದಿಕೊಂಡಿರುವ ಗ್ರಂಥಾಲಯದ ಕಟ್ಟಡ ಜಗುಲಿಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಅಪರಿಚಿತ ಪುರುಷನ ಮೃತದೇಹ ಪತ್ತೆಯಾಗಿದೆ.

 ತಾ.02 ರಂದು ಸನಿಹದ ಅಂಗಡಿಯೊಂದರಲ್ಲಿ ಸಂಜೆ ಕುಡಿಯಲು ನೀರು ಕೇಳಿದ್ದಾನೆ ಕೊನೆಗೆ ಗ್ರಂಥಾಲಯದ ಜಗುಲಿಯ ಮೇಲೆ ಮಿಶ್ರಮಿಸಿದ್ದಾನೆ. ತಾ.03 ರ ಬೆಳಿಗ್ಗೆ ಗ್ರಾಮ ಪಂಚಾಯಿತಿ ಪಿ.ಡಿ.ಓ ಮತ್ತು ಬಿಲ್ ಕಲೆಕ್ಟರ್ ನೋಡಿದ್ದಲ್ಲಿ ಮೃತ ದೇಹ ಪತ್ತೆಯಾಗಿದೆ. ಸುಮಾರು 25 ವರ್ಷ ಪ್ರಾಯವಗಿದ್ದು ತುಂಬುತೋಳಿನ ಮೇಲ್ ಅಂಗಿ ಮತ್ತು ಬರ್ಮುಡ ಚಡ್ಡಿ ಧರಿಸಿದ್ದಾನೆ.

ಹಿಂದಿ ಭಾಷೆಯನ್ನು ಮಾತನಾಡುತಿದ್ದ ಎಂದು ಸನಿಹದ ಅಂಗಡಿ ಮಾಲೀಕರು ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಪಿ.ಡಿ.ಓ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯ ಮಾಹಿತಿ ತಿಳಿದು ಬಂದಲ್ಲಿ ಸನೀಹ ಪೊಲೀಸು ಠಾಣೆಗೆ ಮಾಹಿತಿ ನೀಡುವಂತೆ ಆರಕ್ಷಕ ಇಲಾಖೆ ಮನವಿ ಮಾಡಿದೆ. ಗ್ರಾಮಾಂತರ ಪೋಲಿಸು ಠಾಣೆ 9480804933, 9480804956 ಸಂಪರ್ಕಿಸುವಂತೆ ಕೋರಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 2
Sad Sad 0
Wow Wow 0