Kodagu

ವಿರಾಜಪೇಟೆ: 1.94 ಲಕ್ಷ ಮತದಾರರಿಗೆ ಗಣತಿ ನಮೂನೆ ವಿತರಣೆ

admincoorgdaily

ವಿರಾಜಪೇಟೆ: 1.94 ಲಕ್ಷ ಮತದಾರರಿಗೆ ಗಣತಿ ನಮೂನೆ ವಿತರಣೆ

ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಕಾರ್ಯವು ಕೊಡಗು ಜಿಲ್ಲೆಯ 209-ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಗತಿಯಲ್ಲಿದೆ.

 ಕ್ಷೇತ್ರದ ವ್ಯಾಪ್ತಿಯ ಒಟ್ಟು 277 ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು ದಿನಾಂಕ 30-06-2026 ರಿಂದ ಮನೆ ಮನೆ ಭೇಟಿ ನೀಡಿ ಗಣತಿ ನಮೂನೆಯನ್ನು ಮತದಾರರಿಗೆ ವಿತರಿಸುತ್ತಿದ್ದಾರೆ. ಗಣತಿ ನಮೂನೆ ವಿತರಣೆ 1,94,889 - 84.66%, ಡಿಜಿಟಲೀಕರಣಗೊಂಡ ನಮೂನೆ* 6,222 - 2.70%, ಆನ್‌ಲೈನ್ ಮೂಲಕ ಸಲ್ಲಿಸಿದವರು 302 ಜನ, ಗೈರು,ಸ್ಥಳಾಂತರ, ಮರಣ,ಡುಪ್ಲಿಕೇಟ್ ಸೇರಿ‌ 264 ಮತದಾರರು ಪತ್ತೆಯಾಗಿದ್ದಾರೆ.