ವಿರಾಜಪೇಟೆ;ಬ್ಲಾಕ್ ಬೆಲ್ಟ್ ಪರೀಕ್ಷೆ ಉತ್ತೀರ್ಣಗೊಂಡ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ
ವಿರಾಜಪೇಟೆ;ಸಮರ ಕಲೆಯಲ್ಲಿ ವಿವಿಧ ಪ್ರಕಾರಗಳಿದ್ದು ವಿದ್ಯಾರ್ಥಿಗಳು ವಿವಿಧ ಪ್ರಕಾರಗಳಲ್ಲಿ ತಮ್ಮ ಕಲಾ ಪ್ರದರ್ಶನ ನೀಡುವುದು ವಾಡಿಕೆಯಾಗಿದ್ದು ಗೋಜೋರಿಯೋ ಕರಾಟೆ ತರಬೇತಿ ಶಾಲೆಯ ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಗೋಜೋರಿಯೊ ಕರಾಟೆ ತರಬೇತಿ ಶಾಲೆ ಕೊಡಗು ವಿರಾಜಪೇಟೆ ವತಿಯಿಂದ ನಗರದ ಅತಿಥಿ ಖಾಸಗಿ ಕಟ್ಟಡದ ಸಭಾಂಗಣದಲ್ಲಿ ಎರಡು ದಿನದ ಬ್ಲಾಕ್ ಬೆಲ್ಟ್ ಪರೀಕ್ಷೆ ನಡೆಯಿತು. ವಿರಾಜಪೇಟೆ, ಸಿದ್ದಾಪುರ, ನಾಪೋಕ್ಲು, ಮಾಲ್ದಾರೆ,
ವಿಭಾಗದಿಂದ 08 ಮಂದಿ ವಿಧ್ಯಾರ್ಥಿಗಳು ಪರೀಕ್ಷೆ ಎದುರಿಸಿ ಬ್ಲಾಕ್ ಬೆಲ್ಟ್ ಮತ್ತು ಪ್ರಮಾಣ ಪತ್ರಗಳನ್ನು ಪಡೆದುಕೊಂಡರು. ಮೈಬುಕಾನ್ ಗೋಜೋ ರಿಯೋ ಕರಾಟೆ ಇಂಡಿಯದ ಪ್ರಧಾನ ಶಿಕ್ಷಕರು ಮತ್ತು ಪರೀಕ್ಷಾ ಅಧಿಕಾರಿಗಳಾದ ಶಿಹಾನ್ ಎಸ್. ಪಾರ್ಥಿಬನ್ ಅವರು ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು. ಈ ಸಂಧರ್ಭದಲ್ಲಿ ಗೋಜೋರಿಯೊ ಕರಾಟೆ ತರಬೇತಿ ಶಾಲೆ ಕೊಡಗು ವಿರಾಜಪೇಟೆ ಯ ಮುಖ್ಯ ಶಿಕ್ಷಕರಾದ ಎಂ.ಬಿ.ಚಂದ್ರನ್ ಹಾಜರಿದ್ದರು.
ವರದಿ;ಕಿಶೋರ್ ಕುಮಾರ್ ಶೆಟ್ಟಿ
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
