ವಿರಾಜಪೇಟೆ: ಅನ್ವಾರುಲ್ ಹುದಾ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಂದ ಸ್ವಚ್ಛ ‌ಕೊಡಗು-ಸುಂದರ ಕೊಡಗು ಅಭಿಯಾನ

ವಿರಾಜಪೇಟೆ: ಅನ್ವಾರುಲ್ ಹುದಾ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಂದ ಸ್ವಚ್ಛ ‌ಕೊಡಗು-ಸುಂದರ ಕೊಡಗು ಅಭಿಯಾನ

ವಿರಾಜಪೇಟೆ:ಸ್ವಚ್ಛ ಕೊಡಗು - ಸುಂದರ ಕೊಡಗು" ತ ಅಭಿಯಾನದ ಪ್ರಯುಕ್ತ ವಿರಾಜಪೇಟೆ ಅನ್ವಾರುಲ್ ಹುದಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಶಾಲೆಯ ಪ್ರಾಂಶುಪಾಲರಾದ ಹಸ್ಸೈನಾರ್ ಅವರು ವಿದ್ಯಾರ್ಥಿಗಳಿಗೆ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಕ್ರಮಗಳು ಮತ್ತು ಸಾರ್ವಜನಿಕ ಆಸ್ತಿಗಳನ್ನು ಸಂರಕ್ಷಿಸುವ ಮಹತ್ವದ ಕುರಿತು ವಿವರಿಸಿದರು.

 ಸ್ವಚ್ಛತಾ ಅಭಿಯಾನದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಶಿಕ್ಷಕಿಯರು ಕೂಡ ಪಾಲ್ಗೊಂಡರು. ವಿದ್ಯಾರ್ಥಿಗಳು 'ಸ್ವಚ್ಛ ಕೊಡಗು - ಸುಂದರ ಕೊಡಗು' ಅಭಿಯಾನದ ಭಾಗವಾಗಿ ಬಹಳ ಆಸಕ್ತಿ ಮತ್ತು ಉತ್ಸಾಹದಿಂದ ಶಾಲಾ ಆವರಣದ ಸ್ವಚ್ಛತಾ ಕಾರ್ಯವನ್ನು ನೆರವೇರಿಸಿದರು.